Asianet Suvarna News Asianet Suvarna News

ಒಎನ್'ಜಿಸಿ ಉದ್ಯೋಗಿಗಳಿದ್ದ ಚಾಪರ್ ಕಣ್ಮರೆ, ನಾಲ್ವರ ಸಾವು,ಮೂವರು ನಾಪತ್ತೆ

ಮುಂಬೈ ಜುಹಾ ವಿಮಾನ ನಿಲ್ದಾಣದಲ್ಲಿ ಪವನ್ ಹಾನ್ಸ್ ಚಾಪರ್ ಇಂದು ಬೆಳಿಗ್ಗೆ 10.20ಕ್ಕೆ ಟೇಕ್ ಆಫ್ ಆಗಿ 15 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತು. ಚಾಪರ್'ನಲ್ಲಿದ್ದ 7 ಮಂದಿಯಲ್ಲಿ ಐವರು ಒಎನ್'ಜಿಸಿ ಉದ್ಯೋಗಿಗಳಿದ್ದರು.

ONGC employees crashes off Mumbai coast

ಮುಂಬೈ(ಜ.13): ಒಎನ್'ಜಿಸಿ ಉದ್ಯೋಗಿಗಳಿದ್ದ ಚಾಪರ್ ಟೇಕ್'ಆಫ್ ಆದ ಕೆಲವೇ ನಿಮಿಷಗಳಲ್ಲಿ ಕಣ್ಮರೆಯಾಗಿದ್ದು ಮೂವರು ಮೃತಪಟ್ಟು ನಾಲ್ವರು ಕಣ್ಮರೆಯಾಗಿದ ಘಟನೆ ಮುಂಬೈ ಕರಾವಳಿಯಲ್ಲಿ ನಡೆದಿದೆ

 ಮುಂಬೈ ಜುಹಾ ವಿಮಾನ ನಿಲ್ದಾಣದಲ್ಲಿ ಪವನ್ ಹಾನ್ಸ್ ಚಾಪರ್ ಇಂದು ಬೆಳಿಗ್ಗೆ 10.20ಕ್ಕೆ ಟೇಕ್ ಆಫ್ ಆಗಿ 15 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತು. ಚಾಪರ್'ನಲ್ಲಿದ್ದ 7 ಮಂದಿಯಲ್ಲಿ ಐವರು ಒಎನ್'ಜಿಸಿ ಉದ್ಯೋಗಿಗಳಿದ್ದರು. 4 ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಉಳಿದ ಮೂವರಿಗಾಗಿ ಶೋಧ ನಡೆಸಲಾಗುತ್ತಿದೆ. 7 ಮಂದಿಯಲ್ಲಿ ಇಬ್ಬರು ಪೈಲೆಟ್'ಗಳು ಸೇರಿದ್ದಾರೆ. ಕೆಲವು ಅವಶೇಷಗಳು ಪತ್ತೆಯಾಗಿದ್ದು ಅದು ಚಪರ್'ನದೆ ಎಂಬುದು ಖಚಿತವಾಗಿಲ್ಲ ಎಂದು ನೌಕಾದಳದ ವಕ್ತಾರರು ತಿಳಿಸಿದ್ದಾರೆ.

 ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿ' ಕಾರ್ಯಾಚರಣೆಗಾಗಿ  ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಮನವಿ ಮಾಡಲಾಗಿದ್ದು ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ ಎಂದು ತಿಳಿಸಿದ್ದಾರೆ. 2013ರಲ್ಲಿಯೂ  ಒಎನ್'ಜಿಸಿ ಹೆಲಿಕಾಪ್ಟರ್  ಸಮುದ್ರದಲ್ಲಿ ದುರಂತಕ್ಕೀಡಾಗಿ 12 ಮಂದಿ ಮೃತಪಟ್ಟಿದ್ದರು.

Follow Us:
Download App:
  • android
  • ios