ರೈಲು ಹಳಿ ಮೇಲೆ ಬಿದ್ದು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಮಗು! ಉತ್ತರಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದ ಘಟನೆ! ರೈಲು ಹರಿದರೂ ಹಳಿಗಳ ಮಧ್ಯೆ ಬದುಕುಳಿದ ಹೆಣ್ಣು ಮಗು 

ಮಥುರಾ(ನ.20): ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲು ಚಲಿಸಿದ ಬಳಿಕವೂ ಪವಾಡ ಸದೃಶ್ಯ ರೀತಿಯಲ್ಲಿ 1 ವರ್ಷದ ಬಾಲಕಿಯೊಬ್ಬಳು ಇಂದು ಪ್ರಾಣಪಾಯದಿಂದ ಪಾರಾಗಿದ್ದಾಳೆ.

ಆಕಸ್ಮತಾಗಿ ಫ್ಲಾಟ್ ಫಾರಂನಿಂದ ಕೆಳಗೆ ಬಿದ್ದು, ಹಳಿಗೆ ಹೊಂದಿಕೊಂಡಂತೆ ಗೋಡೆ ಬದಿಯಲ್ಲಿ ಸಿಲುಕಿಕೊಂಡಿದ್ದ ಬಾಲಕಿ ರೈಲು ಚಲಿಸಿದ ಬಳಿಕ ಸುರಕ್ಷಿತವಾಗಿ ಬದುಕುಳಿದಿದ್ದಾಳೆ.

Scroll to load tweet…

ರೈಲು ಚಲಿಸಿದ ಕೂಡಲೇ ಕೆಳಗೆ ಧುಮುಕ್ಕಿದ ಸಹ ಪ್ರಯಾಣಿಕರು ಆ ಬಾಲಕಿಯನ್ನು ಎತ್ತಿಕೊಂಡಿದ್ದು, ಪೋಷಕರ ಕೈಗೆ ನೀಡಿದ್ದಾರೆ. ಇದರಿಂದಾಗಿ ಉಸಿರು ಹೋದಂತಾಗಿದ್ದ ಪೋಷಕರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಆಶ್ಚರ್ಯಕರ ರೀತಿಯಲ್ಲಿ ಬಾಲಕಿ ಬದುಕುಳಿದ ಬಗ್ಗೆ ಸಹ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.