ಮೋನಿಕಾ ಅವರನ್ನು ಕೊಲೆ ಮಾಡಿದ ಆರೋಪಿಗಳು ಕೊಲೆ ನಡೆದ ದಿನ ರಾತ್ರಿ ಆರೋಪಿಗಳು ಬೆಂಗಳೂರಿಗೆ ಬಂದಿದ್ದರು ಎಂಬುದು ಧೃಡ ಪಡ್ಡಿದೆ.

ಬೆಂಗಳೂರು(ಅ.9): ಖ್ಯಾತ ಸುಗಂಧಾ ದ್ರವ್ಯ ತಯಾರಕಿ ಮೋನಿಕಾ ಹತ್ಯೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಮೋನಿಕಾಳನ್ನು ಕೊಲೆ ಮಾಡಿದ್ದ ಹಂತಕರ ಪೈಕಿ ಒಬ್ಬನನ್ನು ಗೋವಾ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಇನ್ನು ಓರ್ವ ಆರೋಪಿಯನ್ನು ಗೋವಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದ್ದು ಆತನ ಹಿನ್ನೆಲೆ ಇನ್ನು ಗೊತ್ತಾಗಿಲ್ಲ. ಇನ್ನು ಆತನನ್ನು ರಹಸ್ಯ ಸ್ಥಳದಲ್ಲಿ ಆತನ ವಿಚಾರಣೆಯನ್ನು ಗೋವಾ ಪೊಲೀಸರು ನಡೆಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಮೋನಿಕಾ ಅವರನ್ನು ಕೊಲೆ ಮಾಡಿದ ಆರೋಪಿಗಳು ಕೊಲೆ ನಡೆದ ದಿನ ರಾತ್ರಿ ಆರೋಪಿಗಳು ಬೆಂಗಳೂರಿಗೆ ಬಂದಿದ್ದರು ಎಂಬುದು ಧೃಡ ಪಡ್ಡಿದೆ. ಯಾಕಂದರೆ ಅದೇ ದಿನ ರಾತ್ರಿ ಮೋನಿಕಾಳ ಎಟಿಎಂ ಬೆಂಗಳೂರಿನಲ್ಲಿ ಬಳಕೆಯಾಗಿದ್ದು ಈ ಸಿಸಿಟಿವಿ ದೃಶ್ಯಾವಳಿಗಳನ್ನು ಗೋವಾ ಪೊಲೀಸರು ಪಡೆದಿದ್ದಾರೆ. ಅದರಲ್ಲಿ ಇಬ್ಬರು ಆರೋಪಿಗಳ ಚಹರೆ ಸಹ ಪತ್ತೆಯಾಗಿದ್ದು ಈ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆಯೇ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಗೋವಾ ಪೊಲೀಸರ ತನಿಖೆಗೆ ಬೆಂಗಳೂರು ಪೊಲೀಸರು ಸಹ ಕೈ ಜೋಡಿಸಿದ್ದು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.