ಸೀಟು ಫುಲ್ ಆಗಲಿಲ್ಲ ಎಂದರೆ ಬಸ್ ಸಂಚಾರವನ್ನೇ ರದ್ದುಪಡಿಸುತ್ತಾರೆ. ಅಂಥದ್ದರಲ್ಲಿ ಒಬ್ಬ ವ್ಯಕ್ತಿಗಾಗಿಯೇ ಒಂದು ವಿಮಾನ ಓಡಿಸುವುದು ಸಾಧ್ಯವೇ? ಇದು ಸಾಧ್ಯವಾಗಿದೆ

 ವಾಷಿಂಗ್ಟನ್(ಜ.06): ಸೀಟು ಫುಲ್ ಆಗಲಿಲ್ಲ ಎಂದರೆ ಬಸ್ ಸಂಚಾರವನ್ನೇ ರದ್ದುಪಡಿಸುತ್ತಾರೆ. ಅಂಥದ್ದರಲ್ಲಿ ಒಬ್ಬ ವ್ಯಕ್ತಿಗಾಗಿಯೇ ಒಂದು ವಿಮಾನ ಓಡಿಸುವುದು ಸಾಧ್ಯವೇ? ನಂಬಿ.

ಇದು ಸಾಧ್ಯವಾಗಿದೆ. ಇಂಥದ್ದೊಂದು ಘಟನೆ ಅಮೆರಿಕದಲ್ಲಿ ನಡೆದಿದೆ. ವಾಷಿಂಗ್ಟನ್‌ನ ಯುವತಿ ರೆಡ್ಡಿಟ್(22)ಗಾಗಿಯೇ ಒಂದು ವಿಮಾನ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲಿ ಯುವತಿಗೆ ವಿಐಪಿ ಸೌಲಭ್ಯ ನೀಡಲಾಗಿದೆ.

 ವಿಮಾನದಲ್ಲಿ ತಾನೊಬ್ಬಳೇ ಇರುವ ಫೋಟೋವನ್ನು ಯುವತಿ ಪೋಸ್ಟ್ ಮಾಡಿದ್ದು, ನಿಗದಿತ ವೇಳೆ ವಿಮಾನ ಇದ್ದರೂ, ಏಜೆಂಟ್ ವಿಮಾನ ರದ್ದಾಗಿದೆ ಎಂದಿದ್ದ. ಹಾಗಾಗಿ, ವಿಳಂಬವಾಗಿ ನಿಲ್ದಾಣಕ್ಕೆ ಬಂದ ಯುವತಿಗಾಗಿ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.