Asianet Suvarna News Asianet Suvarna News

ಮಹಾರಾಷ್ಟ್ರ: ಭೀಮಾ ಕೋರೆಗಾಂವ್​ನಲ್ಲಿ ಜಾತಿ ಹಿಂಸಾಚಾರಕ್ಕೆ ಓರ್ವ ಬಲಿ

  • ದಲಿತರನ್ನು ಒಳಗೊಂಡ ಬ್ರಿಟಿಷ್‌ ಸೇನೆಯು ಮೇಲ್ಜಾತಿಯವರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ್ದ ಸ್ಮರಣಾರ್ಥ ವಿಜಯೋತ್ಸವ
  • ಪುಣೆಯ ಭೀಮಾ ಕೋರೆಗಾಂವ್​ನಲ್ಲಿ ಜಾತಿ ಹಿಂಸಾಚಾರ ಮುಂದುವರೆದಿದ್ದು ಉದ್ವಿಘ್ನ ಪರಿಸ್ಥಿತಿ
One Dies As Caste Clashes Erupt in Bhima Koregaon

ಪುಣೆ: ಪುಣೆಯ ಭೀಮಾ ಕೋರೆಗಾಂವ್​ನಲ್ಲಿ ಜಾತಿ ಹಿಂಸಾಚಾರ ಮುಂದುವರೆದಿದ್ದು ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ.  ಕಿಡಿಗೇಡಿಗಳ ಕಲ್ಲುತೂರಾಟದಲ್ಲಿ ಓರ್ವ ಬಲಿಯಾಗಿದ್ದಾನೆ.

ಭೀಮಾ ಕೋರೆಗಾಂವ್‌ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್‌ ಸೇನೆಯು ಮೇಲ್ಜಾತಿಯವರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ್ದ ಸ್ಮರಣಾರ್ಥ ವಿಜಯೋತ್ಸವ ಆಯೋಜಿಸಲಾಗಿತ್ತು.

200ನೇ ವರ್ಷದ ವಿಜಯೋತ್ಸವ ಅಂಗವಾಗಿ ನಿನ್ನೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮಾತಿನ ಚಕಮಕಿ ತಾರಕಕ್ಕೇರಿದ್ದು ಕಲ್ಲು ತೂರಾಟ ನಡೆದಿದೆ. ಬೆಂಕಿ ಹಚ್ಚಿ ಕಿಡಿಗೇಡಿಗಳು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಮನೆ, ವಾಹನಗಳನ್ನು ಧ್ವಂಸ ಮಾಡಿದ್ದಾರೆ. 144 ಸೆಕ್ಷನ್​ ಜಾರಿಯಿದ್ದರೂ ಇಂದೂ ಕೂಡಾ ಪ್ರತಿಭಟನೆ ಮುಂದುವರೆದಿದೆ. ಕೊರೆಗಾಂವ್‌ ಪಟ್ಟಣ ಮತ್ತೆ ಉದ್ವಿಗ್ನಗೊಂಡಿದೆ.

ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೆಳಿದ್ದಾರೆ.

1 ಜನವರಿ 1818ರಂದು ಭೀಮಾ ಕೋರೆಗಾಂವ್ ನಡೆದ ಕದನವು ಮೇಲ್ಜಾತಿಯವರ ವಿರುದ್ಧ ದಲಿತ-ಶೋಷಿತರ ವಿಜಯವಾಗಿತ್ತು ಎಂದು ದಲಿತ ಮುಖಂಡ ಹಾಗೂ ಚಿಂತಕರು ಅಭಿಪ್ರಾಯಪಡುತ್ತಾರೆ.

Follow Us:
Download App:
  • android
  • ios