ಕಲಾ ಉತ್ಸವ ವೇಳೆ ಶೂಟೌಟ್ , 20 ಜನರಿಗೆ ಗಾಯ: ಶಂಕಿತನ ಹತ್ಯೆ

One dead and 20 injured in shooting at New Jersey Art All Night festival
Highlights

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ

ಕಲಾ ಉತ್ಸವ ವೇಳೆ ಗುಂಡಿನ ದಾಳಿ

ಅಮೆರಿಕದ ನ್ಯೂಜೆರ್ಸಿಯಲ್ಲಿ ಘಟನೆ

ಘಟನೆಯಲ್ಲಿ 20 ಜನರಿಗೆ ಗಾಯ

ಓರ್ವ ಶಂಕಿತನನ್ನು ಹೊಡೆದುರುಳಿಸಿದ ಪೊಲೀಸರು 

ನ್ಯೂಜೆರ್ಸಿ(ಜೂ.17): ಅಮೆರಿಕದ ನ್ಯೂಜೆರ್ಸಿಯ ಟ್ರೇಂಟಾನ್ ನಲ್ಲಿ 24 ಗಂಟೆಯ ಅವಧಿಯ ಕಲಾ ಉತ್ಸವ ವೇಳೆ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ.

ಪೊಲೀಸರು ಶಂಕಿತನೊಬ್ಬನನ್ನು ಹತ್ಯೆ ಮಾಡಿದ್ದು, ಮತ್ತೊಬ್ಬನನ್ನು ವಶಕ್ಕೆ ಪಡೆಯಲಾಗಿದೆ  ಎಂದು ಮೂಲಗಳು ತಿಳಿಸಿವೆ. ಗುಂಡಿನ ದಾಳಿಯಿಂದ ಗಾಯಗೊಂಡಿದ್ದ 20 ಜನರ ಪೈಕಿ 16 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 13 ವರ್ಷದ ಬಾಲಕ ಸೇರಿದಂತೆ ನಾಲ್ವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು  ಕೌಂಟಿ ಪ್ರಾಸಿಕ್ಯೂಟರ್ ಏಂಜೆಲಾ ಒನೊಪ್ರಿ ಹೇಳಿದ್ದಾರೆ.

ಸ್ಥಳೀಯ ಕಲೆ, ಸಂಗೀತ ಹಾಗೂ ಆಹಾರವನ್ನು ಪರಿಚಯಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕಲಾ ಉತ್ಸವದ ಮೇಲೆ ಇಬ್ಬರು ಶಂಕಿತರು ಗುಂಡಿನ ದಾಳಿ ನಡೆಸಿದ್ದಾರೆ. ಶಂಕಿತನೋರ್ವನನ್ನು ಹತ್ಯೆಗೈಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗುಂಡಿನ ದಾಳಿ ಆರಂಭವಾದಾಗ ಸುಮಾರು 1 ಸಾವಿರ ಜನರು ಸ್ಥಳದಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಗುಂಡಿನ ರಭಸಕ್ಕೆ ಕಲಾ ಉತ್ಸವದ ವೇದಿಕೆಯಲ್ಲಿನ ಗಾಜುಗಳು ಮತ್ತಿತರ ವಸ್ತುಗಳು ಒಡೆದು ಹೋಗಿವೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.

loader