Asianet Suvarna News Asianet Suvarna News

ಪ್ರಧಾನಿ ಮೋದಿ ಸಹೋದರ ಮಗಳ ಪರ್ಸ್‌ಗೇ ಕನ್ನ!

ದಿಲ್ಲಿಯಲ್ಲಿ ಪ್ರಧಾನಿ ಮೋದಿ ಸಂಬಂಧಿಯ ಪರ್ಸ್‌ ಕದ್ದ ಕಳ್ಳರು!| ಕಳದಳರಲ್ಲಿ ಓರ್ವ ಅರೆಸ್ಟ್, ಮತ್ತೊಬ್ಬನಿಗಾಗಿ ಹುಡುಕಾಟ

One arrested for robbing PM Narendra Modi niece
Author
Bangalore, First Published Oct 13, 2019, 10:23 AM IST

ನವದೆಹಲಿ[ಅ.13]: ದಿಲ್ಲಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬಸ್ಥರಿಗೇ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಪ್ರಧಾನಿ ಮೋದಿ ಅವರ ಸೋದರ ಸಂಬಂಧಿ ದಮಯಂತಿ ಬೆನ್‌ ಮೋದಿ ಅವರಿಗೆ ಸೇರಿದ 56 ಸಾವಿರ ರು., 2 ಮೊಬೈಲ್‌ ಫೋನ್‌, ಮುಖ್ಯವಾದ ದಾಖಲೆಗಳನ್ನು ಎಗರಿಸಿದ್ದಾರೆ.

ಈ ಕುರಿತು ದಮಯಂತಿ ಅವರು ದಿಲ್ಲಿಯ ಸಿವಿಲ್‌ಲೈನ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಲ್ಲಿನ ಗುಜರಾತಿ ಸಮಾಜ ಭವನದ ಮುಂಭಾಗ ತೆರಳುತ್ತಿದ್ದಾಗ ಬೈಕ್‌ ಮೇಲೆ ಬಂದ ಕಳ್ಳರು ತಮ್ಮ ಪರ್ಸ್‌ ಅನ್ನು ಕದ್ದು, ಪರಾರಿಯಾಗಿದ್ದಾರೆ. ಬ್ಯಾಗ್‌ನಲ್ಲಿ 56 ಸಾವಿರ ಹಣ, 2 ಮೊಬೈಲ್‌, ಮುಖ್ಯವಾದ ದಾಖಲೆಗಳು ಇದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಸೆರೆಗೆ ಜಾಲ ಬೀಸಿದ್ದರು. ಸದ್ಯ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Follow Us:
Download App:
  • android
  • ios