ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿದ ನಂತರ ಪಾಕಿಸ್ತಾನದ ಕುಚೇಷ್ಟೆ/ ಮೋದಿ ಜನ್ಮದಿನದ ನಂತರ ಸಲ್ಲದ ಟ್ವೀಟ್ ಮಾಡಿ ಉಗಿಸಿಕೊಂಡ ಪಾಕ್ ಸಚಿವ
ನವದೆಹಲಿ[ಸೆ. 18] ಪಾಕಿಸ್ತಾನದವರ ಕುಚೇಷ್ಟೆ ಮಾತ್ರ ಯಾವಾಗ ಕಡಿಮೆಯಾಗುತ್ತದೆಯೋ ಯಾರಿಗೂ ಗೊತ್ತಿಲ್ಲ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ತಮ್ಮ ಮನಸಿಗೆ ಕಂಡ ಹೇಳಿಕೆ ಕೊಡುತ್ತಿರುವ ಕಪಿಚೇಷ್ಟೆ ಸಾಲಿಗೆ ಮತ್ತೊಂದು ಸೇಪರ್ಡೆಯಾಗಿದೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಸಂಭ್ರಮ ಎಲ್ಲ ಕಡೆ ಮನೆ ಮಾಡಿದ್ದರೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೈನ್ ಮಾಡಿದ ವ್ಯಂಗ್ಯಭರಿತ ಟ್ವೀಟ್ ಜನಾಕ್ರೋಶಕ್ಕೆ ಕಾರಣವಾಗಿದೆ.
ಪ್ರಧಾನಿ ಜನುಮ ದಿನ: ಅಮ್ಮನ ಕೈಯಡಿಗೆ ಉಂಡ ಮೋದಿ ಧನ್ಯ!
ಗರ್ಭನಿರೋಧಕಗಳ ಮಹತ್ವ ಇಂದು ನಮಗೆ ಅರ್ಥವಾಗಿದೆ ಎನ್ನುತ್ತ #ಮೋದಿ ಬರ್ತ್ ಡೇ ಎಂದು ಟ್ವೀಟ್ ಮಾಡಿದ್ದಾರೆ. ಇಂದು? ವರ್ಷದಲ್ಲಿ ಕೇವಲ ಒಂದು ದಿನ? ವರ್ಷದಲ್ಲಿ 365 ದಿನವು ಅವುಗಳ ಮಹತ್ವ ನಿಮಗೆ ಗೊತ್ತಿಲ್ಲವೇ ಎಂದು ನೆಟ್ಟಿಗರು ತಿರುಗೇಟು ನೀಡಿದ್ದಾರೆ. ಇನ್ನು ಕೆಲವರು ಇಮ್ರಾನ್ ಖಾನ್ ಅವರನ್ನು ಸೇರಿಸಿ ಸರಿಯಾಗಿ ಕಾಲೆಳೆದಿದ್ದಾರೆ.
