Asianet Suvarna News Asianet Suvarna News

ವಾರ್ಧಾದಲ್ಲಿಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ

ಈ ಸಭೆಯಲ್ಲಿ ದೇಶಾದ್ಯಂತ ಹರಡಲಾಗಿರುವ ಭೀತಿಯ ವಾತಾವರಣ, ಹಿಂಸೆ, ದ್ವೇಷದ ವಾತಾವರಣದ ವಿರುದ್ಧ ಸ್ಪಷ್ಟ ಸಂದೇಶ ರವಾನಿಸಲಾಗುತ್ತದೆ ಎಂದು ಸೋಮವಾರ ಕಾಂಗ್ರೆಸ್‌ ಹೇಳಿದೆ. ಈ ಮೂಲಕ ಗಾಂಧೀಜಿ ಅವರ ಶಾಂತಿ ಸಂದೇಶವನ್ನು ಕಾಂಗ್ರೆಸ್‌ ರಾಷ್ಟ್ರಾದ್ಯಂತ ಪಸರಿಸಲಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು. 

On Gandhi Jayanti Rahul Gandhi to visit Wardha today
Author
Mumbai, First Published Oct 2, 2018, 11:07 AM IST
  • Facebook
  • Twitter
  • Whatsapp

ವರ್ಧಾ(ಮಹಾರಾಷ್ಟ್ರ): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಆರಂಭದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ಪರಮೋಚ್ಛ ನೀತಿ-ನಿರೂಪಕ ಸಂಸ್ಥೆಯಾದ ಕಾರ್ಯಕಾರಿ ಸಮಿತಿ ಸಭೆ ವಾರ್ಧಾದಲ್ಲಿ ಇಂದು ನಡೆಯಲಿದೆ. 

ಈ ಸಭೆಯಲ್ಲಿ ದೇಶಾದ್ಯಂತ ಹರಡಲಾಗಿರುವ ಭೀತಿಯ ವಾತಾವರಣ, ಹಿಂಸೆ, ದ್ವೇಷದ ವಾತಾವರಣದ ವಿರುದ್ಧ ಸ್ಪಷ್ಟ ಸಂದೇಶ ರವಾನಿಸಲಾಗುತ್ತದೆ ಎಂದು ಸೋಮವಾರ ಕಾಂಗ್ರೆಸ್‌ ಹೇಳಿದೆ. ಈ ಮೂಲಕ ಗಾಂಧೀಜಿ ಅವರ ಶಾಂತಿ ಸಂದೇಶವನ್ನು ಕಾಂಗ್ರೆಸ್‌ ರಾಷ್ಟ್ರಾದ್ಯಂತ ಪಸರಿಸಲಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು. 

ವಾರ್ಧಾದಲ್ಲಿರುವ ಸೇವಾಶ್ರಮದಲ್ಲಿ ನಡೆಯಲಿರುವ ಶಾಂತಿ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಭಾಗವಹಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಸೇರಿದಂತೆ ಹಲವು ಐತಿಹಾಸಿಕ ಕ್ಷಣಗಳಿಗೆ ಸೇವಾಗ್ರಾಮ ಸಾಕ್ಷಿಯಾಗಿದೆ.

Follow Us:
Download App:
  • android
  • ios