Asianet Suvarna News Asianet Suvarna News

ಚಲಿಸುತ್ತಿದ್ದ ಕಾರಿನಿಂದ ಮಹಿಳೆಯನ್ನು ಹೊರಗೆಸೆದ ಗಂಡ, ಅತ್ತೆ , ಮಾವ!

ದಂಪತಿ ನಡುವೆ ತಲೆದೋರಿದ ಮನಸ್ತಾಪ| ಎರಡು ಬಾರಿ ಹೆಂಡತಿಯನ್ನು ಮನವೊಲಿಸಿ ಮನೆಗೆ ಕರೆ ತಂದಿದ್ದ ಗಂಡ| ಹೆಂಡತಿಯನ್ನು ಮುಗಿಸಲು ಅಪ್ಪ ಅಮ್ಮನ ಸಹಾಯದೊಂದಿಗೆ ಚಲಿಸುತ್ತಿದ್ದ ಕಾರಿನಿಂದಲೇ ಹೊರಗೆಸೆದ| 

On CCTV Tamil Nadu Woman Pushed From Car  Allegedly By In Laws
Author
Bangalore, First Published Jun 12, 2019, 5:24 PM IST

ಚೆನ್ನೈ[ಜೂ.12]: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಮಹಿಳೆಯೊಬ್ಬಳನ್ನು ಚಲಿಸುತ್ತಿದ್ದ ಕಾರಿನಿಂದ ಹೊರಗೆಸೆದಿರುವ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಮಹಿಳೆಯನ್ನು ಕೊಲ್ಲುವ ಸಲುವಾಗಿ ಆಕೆಯ ಗಂಡ, ಅತ್ತೆ ಹಾಗೂ ಮಾವ ಸೇರಿ ಕಾರಿನಿಂದ ಹೊರಗೆಸೆದಿದ್ದರೆನ್ನಲಾಗಿದೆ.

38 ವರ್ಷದ ಆರತಿ ಅರುಣ್ ಹಾಗೂ ಆಕೆಯ ಗಂಡನ ನಡುವೆ ಹಲವಾರು ಮನಸ್ತಾಪಗಳಿದ್ದವು. ಇದರಿಂದ ಬೇಸತ್ತ ಆರತಿ ತನ್ನಿಬ್ಬರು ಮಕ್ಕಳೊಂದಿಗೆ ಗಂಡನ ಮನೆ ತೊರೆದಿದ್ದಳು. ಆದರೆ ಕೆಲ ದಿನಗಳ ಹಿಂದಷ್ಟೇ ತನ್ನ ದಾಂಪತ್ಯ ಜೀವನವನ್ನು ಸರಿಪಡಿಸುವ ಮಹದಾಸೆಯೊಂದಿಗೆ ಗಂಡನ ಮನೆಗೆ ಮರಳಿದ್ದಳು. 

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಗಂಡ ಅರುಣ್ ಅಮಲ್ ರಾಜ್, ತನ್ನ ಹೆಂಡತಿಯ ಮೇಲೆ ರೇಗಾಡುವುದು ಸಾಮಾನ್ಯವಾಗಿತ್ತು. ಆದರೆ ತನ್ನೊಂದಿಗೆ ಮತ್ತೆ ಬಾಳಿ ಬದುಕುವ ಆಸೆಯೊಮದಿಗೆ ಮರಳಿದ್ದ ಹೆಂಡತಿಯನ್ನು ತನ್ನ ಅಪ್ಪ ಹಾಗೂ ಅಮ್ಮನೊಂದಿಗೆ ಸೇರಿ ಕೊಲ್ಲಲು ಯತ್ನಿಸಿದ ಅಮಲ್ ರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಆರತಿ ಹಾಗೂ ಅಮಲ್ ರಾಜ್ 2008ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದರೆ ಮನಸ್ತಾಪಗಳಿಂದಾಗಿ ಇಬ್ಬರ ನಡುವಿನ ಸಂಬಂಧರ್ಧ ಹದಗೆಟ್ಟಿತ್ತು. ಮದುವೆಯಾದ 6 ವರ್ಷಗಳ ಬಳಿಕ, ಅಂದರೆ 2014ರಲ್ಲಿ ದಿನ ನಿತ್ಯದ ಜಗಳದಿಂದ ಬೇಸತ್ತ ಆರತಯಿ ವಿಚ್ಛೇದನ ಪಡೆಯಲು ನಿರ್ಧರಿಸಿದರು. ಹೀಗಾಗಿ ತನ್ನಿಬ್ಬರು ಮಕ್ಕಳೊಂದಿಗೆ ಆಕೆ ಮುಂಬೈನ ತನ್ನ ತಾಯಿ ಮನೆಗೆ ತೆರಳಿದ್ದರು. ಮುಂಬೈ ಕೋರ್ಟ್ ನಲ್ಲಿ ಶೋಷಣೆ ಹಾಗೂ ಮಾನಸಿಕ ಕಿರುಕುಳದಿಂದಾಗಿ ವಿಚ್ಛೇದನಕ್ಕೆ ಮನವಿ ಸಲ್ಲಿಸಿದ್ದರು. ಈ ವೇಳೆ ರಾಜಿ ಸಂಧಾನ ನಡೆಸಿದ್ದ ಅಮಲ್ ರಾಜ್ ಹೆಂಡತಿಯನ್ನು ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಹೊಸದಾಗಿ ಜೀವನ ಆರಂಭಿಸುವ ಭರವಸೆ ನಿಡಿದ್ದರು. 

ಬಳಿಕ ಎರಡೂ ಕುಟುಂಬದ ಸದಸ್ಯರು ಪ್ರವಾಸಕ್ಕೆ ತೆರಳಿದ್ದು, ಇದು ಆರತಿ ಪಾಲಿಗೆ ಬಹಳ ಕೆಟ್ಟ ನುಭವ ನೀಡಿತು. ಅಮಲ್ ರಾಜ್ ತನ್ನ ಹಿಂದಿನ ಚಾಳಿ ಮತ್ತೆ ಮುಂದುವರೆಸಿದ್ದು, ಆರತಿಗೆ ಮತ್ತೆ ಬೈಗುಳ ನೀಡಲಾರಂಭಿಸಿದ್ದ. ಇದರಿಂದ ಬೇಸತ್ತ ಆರತಿ ಊಟಿ ಪೊಲಿಸ್ ಠಾಣೆಯಲ್ಲೇ ಪತಿ ವಿರುದ್ಧ ದುರು ದಾಖಲಿಸಿದ್ದರು. ಆದರೆ ಮತ್ತೊಮ್ಮೆ ಅಮಲ್ ರಾಜ್ ತನ್ನ ಪತ್ನಿಯನ್ನು ಸಂತೈಸಲು ಯಶಸ್ವಿಯಾಗುತ್ತಾನೆ. 

ಆದರೆ ಮನೆಗೆ ಬಂದ ಬಳಿಕ ಕಿರುಕುಳ ಮುಂದುವರೆದಿದೆ. ದಂಪತಿ ನಡುವಿನ ಜಗಳ ಅದೆಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಅಮಲ್ ರಾಜ್ ತನ್ನ ತಂದೆ ತಾಯಿಯ ಸಹಾಯದೊಂದಿಗೆ ಚಲಿಸುವ ಕಾರಿನಿಂದ ಆರತಿಯನ್ನು ಹೊರಗೆಸೆದು ಸಾಯಿಸಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಆರತಿ ಬದುಕುಳಿದಿದ್ದಾನೆ. ಇನ್ನು ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Follow Us:
Download App:
  • android
  • ios