ಮೋದಿ ಸರ್ಕಾರದ ವಿರುದ್ಧ ಬಿಜೆಪಿ ಧುರೀಣ ಯಶವಂತ್ ಸಿನ್ಹಾ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಹೆಸರನ್ನು ಹೇಳದೇ, ಒಂದು ವೇಳೆ ನಾನು 80 ನೇ ವಯಸ್ಸಿನಲ್ಲಿಯೂ ಸಚಿವ ಸ್ಥಾನದ ಅಭ್ಯರ್ಥಿಯಾಗಿದ್ದರೆ ಅವರು ವಿತ್ತ ಸಚಿವರಾಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನವದೆಹಲಿ (ಸೆ.29): ಮೋದಿ ಸರ್ಕಾರದ ವಿರುದ್ಧ ಬಿಜೆಪಿ ಧುರೀಣ ಯಶವಂತ್ ಸಿನ್ಹಾ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಹೆಸರನ್ನು ಹೇಳದೇ, ಒಂದು ವೇಳೆ ನಾನು 80 ನೇ ವಯಸ್ಸಿನಲ್ಲಿಯೂ ಸಚಿವ ಸ್ಥಾನದ ಅಭ್ಯರ್ಥಿಯಾಗಿದ್ದರೆ ಅವರು ವಿತ್ತ ಸಚಿವರಾಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಯಾವತ್ತೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಾರದ ವ್ಯಕ್ತಿ ನನ್ನನ್ನು ಪ್ರಶ್ನಿಸುತ್ತಾರೆ. ಕಪ್ಪುಹಣದ ಬಗ್ಗೆ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಇಬ್ಬರು ಬಿಜೆಪಿ ಮುತ್ಸದ್ದಿಗಳ ವಾಕ್ಸಮರ ಮುಂದುವರೆದಿದೆ. ಅಚ್ಚರಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
