ಹೊಸನಗರ(ಅ.31): ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರು ಅಗ್ನಿ ಆಕಸ್ಮಿಕಕ್ಕೊಳಗಾಗಿ ರಸ್ತೆ ಮಧ್ಯದಲ್ಲೇ ಹೊತ್ತಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಮಾರುತಿಪುರದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಮಾರುತೀಪುರ ಪಟ್ಟಣದ ವರ್ತಕ ಪ್ರಾಣೇಶ ಕಾರಿನ ಮಾಲೀಕ. ಕೃಷ್ಣ ಎನ್ನುವವರು ಕಾರು ಚಲಾಯಿಸುತ್ತಿದ್ದರು. ಕಾರು ಚಾಲನೆ ಮಾಡಿ ಅರ್ಧ ಕಿ.ಮೀ. ಕ್ರಮಿಸುವಷ್ಟರಲ್ಲಿ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಚಾಲಕ ಕಾರಿನಿಂದ ಇಳಿದು ನೋಡುವಷ್ಟರಲ್ಲಿ ಬೆಂಕಿ ಜ್ವಾಲೆ ಇಡೀ ಕಾರಿಗೆ ವ್ಯಾಪಿಸಿದೆ.

ಕೇವಲ ಅರ್ಧಗಂಟೆಯೊಳಗೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.