ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ ಘಟನೆಯನ್ನು ಖಂಡಿಸಿ ಓಂ ಸ್ವಾಮಿಯವರು ದಿಲ್ಲಿಯ ಜಂತರ್'ಮಂತರ್'ನಲ್ಲಿ ಕ್ಯಾಂಡಲ್'ಲೈಟ್ ಮೆರವಣಿಗೆಯಲ್ಲಿ ಭಾಗವಹಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ಕೆಲ ಮಹಿಳೆಯರು ಓಂ ಸ್ವಾಮಿಗೆ ಗೂಸಾ ಕೊಟ್ಟಿರುವ ವಿಡಿಯೋ ವೈರಲ್ ಆಗುತ್ತಿದೆ.

ನವದೆಹಲಿ(ಜುಲೈ 12): ಹಿಂದಿಯ ಬಿಗ್ ಬಾಸ್ ರಿಯಾಲಿಟಿ ಶೋ ನೋಡುವವರಿಗೆ ಈ ಸ್ವಾಮಿ ತೀರಾ ಚಿರಪರಿಚಿತ. ಶೋನಲ್ಲಿ ಸಾಕಷ್ಟು ಕಿರಿಕ್ ಮಾಡಿಕೊಂಡು ಬಿಗ್ ಬಾಸ್ ಮನೆಯಿಂದಲೇ ಹೊರದಬ್ಬಿಸಿಕೊಂಡ ಓಂ ಸ್ವಾಮಿ, ಹೊರಗೆ ಬಂದ ನಂತರವೂ ಹಲವು ವಿವಾದಗಳಿಗೆ ಕಾರಣರಾಗಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಮಹಿಳೆಯರಿಂದ ಹಲ್ಲೆಗೆ ತುತ್ತಾಗಿದ್ದ ಓಂ ಸ್ವಾಮಿ ಇದೀಗ ರಾಜಧಾನಿಯಲ್ಲಿ ಮತ್ತೊಮ್ಮೆ ನಾರಿಮಣಿಗಳಿಂದ ಗೂಸಾ ತಿಂದಿದ್ದಾರೆ.

ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ ಘಟನೆಯನ್ನು ಖಂಡಿಸಿ ಓಂ ಸ್ವಾಮಿಯವರು ದಿಲ್ಲಿಯ ಜಂತರ್'ಮಂತರ್'ನಲ್ಲಿ ಕ್ಯಾಂಡಲ್'ಲೈಟ್ ಮೆರವಣಿಗೆಯಲ್ಲಿ ಭಾಗವಹಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ಕೆಲ ಮಹಿಳೆಯರು ಓಂ ಸ್ವಾಮಿಗೆ ಗೂಸಾ ಕೊಟ್ಟಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ, ಮಹಿಳೆಯರು ಈ ರೀತಿ ವರ್ತಿಸಲು ಏನು ಕಾರಣ ಎಂಬುದು ಗೊತ್ತಾಗಿಲ್ಲ. ಓಂ ಸ್ವಾಮಿಯವರ ನೆರವಿಗೆ ಬಂದ ಮತ್ತೊಬ್ಬ ವ್ಯಕ್ತಿಯ ಮೇಲೂ ಮಹಿಳೆಯರು ಕೈ ಮಾಡಿದ್ದು ವಿಶೇಷ. ಘಟನೆಗೆ ಕಾರಣ ಏನು ಎಂಬುದು ತಿಳಿಯಬೇಕಿದೆ.

ಮಹಾತ್ಮ ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆಯವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಓಂ ಸ್ವಾಮಿ ದಿಲ್ಲಿಯ ವಿಕಾಸ್ ನಗರಕ್ಕೆ ಹೋದಾಗಲೂ ಅವರ ಮೇಲೆ ಮಹಿಳಾ ಮಣಿಗಳು ಹಲ್ಲೆ ಮಾಡಿದ್ದರು. ಮಹಿಳೆಯರ ಬಗ್ಗೆ ಓಂ ಸ್ವಾಮಿ ಅಸಭ್ಯ ಮಾತುಗಳನ್ನಾಡಿದ್ದ ಹಿನ್ನೆಲೆಯಲ್ಲಿ ನಾರಿಯರಿಂದ ಗೂಸಾ ಸಿಕ್ಕಿತ್ತು.