ಜೈಪುರದಲ್ಲಿ ತನಗೆ ಸಾಕಷ್ಟು ಜಮೀನು ಇದೆ. ಕೆಲವನ್ನು ಮಾರಿ ಮೋದಿಯವರಿಗೆ ಉಡುಗೊರೆ ಕೊಡಬೇಕೆಂದುಕೊಂಡಿದ್ದೇನೆ. ಮೋದಿಜೀ ಇಲ್ಲಿ ಬಂದು ನನ್ನನ್ನು ಭೇಟಿಯಾಗುವವರೆಗೂ ನನ್ನ ಧರಣಿ ನಿಲ್ಲಿಸುವುದಿಲ್ಲ ಎಂದೂ ಈ ಮಹಿಳೆ ಹಠ ಹಿಡಿದಿದ್ದಾಳೆ. ಸೆಪ್ಟೆಂಬರ್ 9ರಿಂದ ಜಂತರ್'ಮಂತರ್'ನಲ್ಲಿ ಈ ಮಹಿಳೆ ಧರಣಿ ಕುಳಿತೇ ಇದ್ದಾಳೆ.
ನವದೆಹಲಿ(ಅ. 07): ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಯಾಗಬೇಕೆಂದು ಹಠಹಿಡಿದಿದ್ದಾಳೆ. ಜೈಪುರದ ಓಂ ಶಾಂತಿ ಶರ್ಮಾ ಎಂಬಾಕೆ ಮೋದಿಯವರನ್ನು ವಿವಾಹವಾಗುವ ಇಚ್ಛೆಯಿಂದ ಇಲ್ಲಿಯ ಜಂತರ್'ಮಂತರ್'ನಲ್ಲಿ ಕಳೆದೊಂದು ತಿಂಗಳಿನಿಂದ ಧರಣಿ ಕುಳಿತಿದ್ದಾಳೆ. 40 ವರ್ಷದ ಓಂ ಶಾಂತಿ ಶರ್ಮಾ ಈ ಹಿಂದೆ ವಿವಾಹವಾಗಿದ್ದು, 20 ವರ್ಷದ ಮಗಳಿದ್ದಾಳೆ. ಆದರೆ, ಹಲವು ವರ್ಷಗಳಿಂದ ಗಂಡನಿಂದ ದೂರವಾಗಿ ಒಂಟಿಯಾಗಿದ್ದಾಳಂತೆ. ಪ್ರಧಾನಿ ಮೋದಿ ಕೂಡ ತನ್ನ ಹಾಗೆಯೇ ಒಂಟಿಯಾಗಿದ್ದು, ಅವರನ್ನು ಮದುವೆಯಾಗಬಯಸುವೆ ಎಂದು ಶಾಂತಿ ಹೇಳುತ್ತಾಳೆ.
"ನನ್ನ ಈ ವರ್ತನೆ ನೋಡಿ ಜನರು ಅಪಹಾಸ್ಯ ಮಾಡುತ್ತಾರೆಂದು ನನಗೆ ಗೊತ್ತು. ನಾನೇನೂ ಮಾನಸಿಕ ಅಸ್ವಸ್ಥೆಯಲ್ಲ. ನರೇಂದ್ರ ಮೋದಿಯವರನ್ನು ಕಂಡರೆ ನನಗೆ ಬಹಳ ಗೌರವ. ಹಿರಿಯರಿಗೆ ಗೌರವ ಕೊಡಬೇಕು, ಅವರ ಕೆಲಸದಲ್ಲಿ ನೆರವಾಗಬೇಕೆಂಬ ಸಂಸ್ಕೃತಿಯನ್ನು ಮನೆಯಲ್ಲಿ ಕಲಿಸಿಕೊಟ್ಟಿದ್ದಾರೆ. ದೇಶಸೇವೆ ನಿಮಿತ್ತ ವಿಪರೀತ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಧಾನಿಯವರಿಗೆ ಸಹಾಯದ ಅಗತ್ಯವಿದೆ. ಹೀಗಾಗಿ, ಅವರಿಗೆ ಸೇವೆ ಮಾಡಿ ನೆರವು ನೀಡಲು ಮದುವೆಯಾಗಬಯಸುವೆ" ಎಂದು ಈ ಓಂ ಶಾಂತಿ ಶರ್ಮಾ ಕಾರಣ ಕೊಡುತ್ತಾಳೆ.
ಜೈಪುರದಲ್ಲಿ ತನಗೆ ಸಾಕಷ್ಟು ಜಮೀನು ಇದೆ. ಕೆಲವನ್ನು ಮಾರಿ ಮೋದಿಯವರಿಗೆ ಉಡುಗೊರೆ ಕೊಡಬೇಕೆಂದುಕೊಂಡಿದ್ದೇನೆ. ಮೋದಿಜೀ ಇಲ್ಲಿ ಬಂದು ನನ್ನನ್ನು ಭೇಟಿಯಾಗುವವರೆಗೂ ನನ್ನ ಧರಣಿ ನಿಲ್ಲಿಸುವುದಿಲ್ಲ ಎಂದೂ ಈ ಮಹಿಳೆ ಹಠ ಹಿಡಿದಿದ್ದಾಳೆ. ಸೆಪ್ಟೆಂಬರ್ 9ರಿಂದ ಜಂತರ್'ಮಂತರ್'ನಲ್ಲಿ ಈ ಮಹಿಳೆ ಧರಣಿ ಕುಳಿತೇ ಇದ್ದಾಳೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ವಿವಾಹಿತರಾಗಿದ್ದಾರೆ. ಜಶೋದಾಬೆನ್ ಅವರನ್ನು ಮೋದಿ ಮದುವೆಯಾಗಿದ್ದರೂ ಹಲವಾರು ವರ್ಷಗಳಿಂದ ದೂರವಾಗಿಯೇ ಉಳಿದಿದ್ದಾರೆ.