ಇದರೊಂದಿಗೆ ವಿಶ್ವದ ಅತಿ ಹಿರಿಯ ಪಟ್ಟ ಇದೀಗ ಜಪಾನ್ 117 ವರ್ಷ ನಬಿ ತಜಿಮಾ ಪಾಲಾಗಿದೆ.
ಕಿಂಗ್'ಸ್ಟನ್(ಸೆ.18): ಕಳೆದ ವರ್ಷವಷ್ಟೇ ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದ ಜಮೈಕಾದ ವೈಲೆಟ್ ಮೊಸ್ಸೆ ಬ್ರೌನ್ (117 ವರ್ಷ) ನಿಧನರಾಗಿದ್ದಾರೆ.
ಮುಂದಿನ ವರ್ಷದ ಏ.15ಕ್ಕೆ ಬ್ರೌನ್'ಗೆ 118 ವರ್ಷ ತುಂಬುತ್ತಿತ್ತು. ತಮ್ಮ 110ನೇ ಜನ್ಮ ದಿನಾಚರಣೆ ಆಚರಣೆ ವೇಳೆ ದೀರ್ಘಕಾಲೀನ ಆಯುಷ್ಯದ ಸೀಕ್ರೆಟ್ ಏನು ಎಂಬ ಪ್ರಶ್ನೆಗೆ, ದನಗಳ ಕಾಲು ಸೇವನೆ, ರಮ್ ಕುಡಿಯದೇ ಇರುವುದು ಮತ್ತು ಬೈಬಲ್ ಅನ್ನು ನಿತ್ಯ ಅಧ್ಯಯನ ಮಾಡುವುದಾಗಿದೆ ಎಂದು ಉತ್ತರಿಸಿದ್ದರು. ಅಲ್ಲದೆ, ಆ ಸಂದರ್ಭದಲ್ಲಿ ನಾನು 110ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ ಎಂದು ಯಾವತ್ತೂ ಅನ್ನಿಸಿಲ್ಲ ಎಂದಿದ್ದರು.
ಇದರೊಂದಿಗೆ ವಿಶ್ವದ ಅತಿ ಹಿರಿಯ ಪಟ್ಟ ಇದೀಗ ಜಪಾನ್ 117 ವರ್ಷ ನಬಿ ತಜಿಮಾ ಪಾಲಾಗಿದೆ.
ಚಿತ್ರಕೃಪೆ: AP
