ಉತ್ತರಪ್ರದೇಶದ ಮಿರ್ಜಾಪುರ್ ಬಳಿ ಗಂಗಾನದಿಯಲ್ಲಿ ಕಟ್ಟಿಗೆಯ ತೆಪ್ಪದಲ್ಲಿ ಕಂತೆ ಕಂತೆ 500 ಮತ್ತು 1000 ರೂ. ನೋಟುಗಳು ತೇಲಿಬಂದಿವೆ. ನದಿಯಲ್ಲಿ ಸ್ನಾ ಮಾಡುತ್ತಿದ್ದ ಜನ ನೋಟಿನ ಕಂತೆಗಳನ್ನ ಕಂಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ಧಾರೆ. ಪರಿಶೀಲನೆ ನಡೆಸಿದ ಪೊಳಿಸರು ಹಣವನ್ನ ವಶಕ್ಕೆ ಪಡೆದಿದ್ದಾರೆ.

ಮಿರ್ಜಾಪುರ್(ನ.11): ಈಗ ಎಲ್ಲೆಲ್ಲೂ ದುಡ್ಡಿನದ್ಧೇ ಸುದ್ದಿ. ಕಪ್ಪುಹಣಕ್ಕೆ ತಡೆಹಾಕಲು ಮೋದಿ 500 ಮತ್ತು 1000 ರೂಪಾಯಿ ನೋಟುಗಳನ್ನ ರದ್ದು ಮಾಡಿದರು. ಇದು ಕಾಳಧನಿಕರಿಗೆ ಅಕ್ಷರಶಃ ಬಿಸಿಮುಟ್ಟಿದೆ. ಲೆಕ್ಕವಿಲ್ಲದ ಅಕ್ರಮ ಹಣ ಹೇಗೆ ಬಳಸುವುದೆಂದು ದಿಕ್ಕೆಟ್ಟ ಕೆಲ ಕಾಳಧನಿಕರು ಹಣಕ್ಕೆ ಬೆಂಕಿ ಹಚ್ಚುವುದು ಮತ್ತು ನೀರಿನಲ್ಲಿ ತೇಲಿಬಿಡಲು ಮುಂದಾಗಿದ್ದಾರೆ.