ಅರ್ಕಿಟೆಕ್ಟ್ ಯುವತಿಯ ಜೊತೆ ಅಸಭ್ಯ ವರ್ತನೆ ಮಾಡಿದ ಓಲಾ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ.  ಯುವತಿಯೊಬ್ಬರು ಕೊಡಿಹಳ್ಳಿಯಿಂದ ಏರ್ ಪೋರ್ಟ್ ಗೆ ಓಲಾ ಬುಕ್ ಮಾಡಿದ್ದರು. ಚಿಕ್ಕಜಾಲ ಬಳಿ ವಾಹನ ನಿಲ್ಲಿಸಿ ಚಾಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಯುವತಿ ಮುಂಬಯಿಗೆ ತೆರಳಿ ತನ್ನ ತಂದೆಗೆ ವಿಷಯ ತಿಳಿಸಿದ್ದಾರೆ.   

ಬೆಂಗಳೂರು (ಜೂ. 05): ಅರ್ಕಿಟೆಕ್ಟ್ ಯುವತಿಯ ಜೊತೆ ಅಸಭ್ಯ ವರ್ತನೆ ಮಾಡಿದ ಓಲಾ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ. 

ಯುವತಿಯೊಬ್ಬರು ಕೊಡಿಹಳ್ಳಿಯಿಂದ ಏರ್ ಪೋರ್ಟ್ ಗೆ ಓಲಾ ಬುಕ್ ಮಾಡಿದ್ದರು. ಚಿಕ್ಕಜಾಲ ಬಳಿ ವಾಹನ ನಿಲ್ಲಿಸಿ ಚಾಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಯುವತಿ ಮುಂಬಯಿಗೆ ತೆರಳಿ ತನ್ನ ತಂದೆಗೆ ವಿಷಯ ತಿಳಿಸಿದ್ದಾರೆ.

ಯುವತಿಯ ತಂದೆ ಈ ಮೇಲ್ ಮುಖಾಂತರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಜೆ ಪಿ ನಗರ ಪೊಲೀಸರಿಗೆ ತನಿಖೆ ನೀಡುವಂತೆ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ. ಜೆ ಪಿ ‌ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.