ಪಿರಿಯಾಪಟ್ಟಣದ ಅಂಗಡಿಗಳಿಗೆ ಮಾರಾಟ ಮಾಡಲು ಮಂಗಳೂರಿನಿಂದ ತರಲಾಗಿದ್ದ 700 ಕೆ.ಜಿ ಪ್ಲಾಸ್ಟಿಕ್ ಕವರ್‌ಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ಪುರಸಭಾ ಅಕಾರಿಗಳು ಪ್ರಕರಣ ದಾಖಲಿಸಿಕೊಂಡು ವಾಹನ ಸಮೇತ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಿರಿಯಾಪಟ್ಟಣ(ಅ.20): ಅಂಗಡಿಗಳಿಗೆ ಮಾರಾಟ ಮಾಡಲು ತಂದಿದ್ದ 700 ಕೆಜಿ ಪ್ಲಾಸ್ಟಿಕ್ ಕವರ್ಗಳನ್ನು ಪುರಸಭಾ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಅಂಗಡಿಗಳಿಗೆ ಮಾರಾಟ ಮಾಡಲು ಮಂಗಳೂರಿನಿಂದ ತರಲಾಗಿದ್ದ 700 ಕೆ.ಜಿ ಪ್ಲಾಸ್ಟಿಕ್ ಕವರ್ಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ಪುರಸಭಾ ಅಕಾರಿಗಳು ಪ್ರಕರಣ ದಾಖಲಿಸಿಕೊಂಡು ವಾಹನ ಸಮೇತ ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾರಾಟ ಮಾಡಲು ಬಂದಿದ್ದ ಮಹಮ್ಮದ್ ಮುಸ್ತ, ಅಬ್ದುಲ್ ಖಾದರ್ ಹಾಗೂ ಮಹಮ್ಮದ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕ್ರಮಕ್ಕಾಗಿ ಉಪ ವಿಭಾಗಾಕಾರಿಗಳಿಗೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಕಾರಿ ಡಿ. ಪುಟ್ಟರಾಜು, ಪರಿಸರ ಎಂಜಿನಿಯರ್ ರವಿಕುಮಾರ್, ವ್ಯವಸ್ಥಾಪಕ ರೇವಣ್ಣ, ಆರ್ಐ ಮಧುಸೂಧನ್, ಆರೋಗ್ಯ ನಿರೀಕ್ಷಕ ರಾಮನರಸಯ್ಯ, ಸಿಬ್ಬಂದಿಗಳಾದ ಕುಮಾರ, ಉಮೇಶ್, ರಮೇಶ, ಮಂಜು ಭಾಗವಹಿಸಿದ್ದರು.
