ರಾಷ್ಟ್ರೀಯ ಹೆದ್ದಾರಿ 48ರ ಹಾಸನ ಮಂಗಳೂರು ರಸ್ತೆ ಅಗಲೀಕರಣ ಹೆಸರಲ್ಲಿ ಭರ್ಜರಿ ಲೂಟಿಯಾಗುತ್ತಿದೆ. ಭೂಮಿ, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡುತ್ತದೆ. ಆದರೆ ಪರಿಹಾರ ಕೊಡುವ ಅಧಿಕಾರಿಗಳು ಸಂತ್ರಸ್ತರಿಂದ 2 ರಿಂದ 10 ಪರ್ಸೆಂಟ್​ ಕಮಿಷನ್ ಪಡೆದು ವಿತರಿಸುವುದು. ಇದು ಕವರ್​ಸ್ಟೋರಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಈ ಕಮಿಷನ್​ ದಂಧೆಯಲ್ಲಿ ಸರ್ವೇಯರ್​ ರಂಗಸ್ವಾಮಿ, ಗಂಗಾಧರ್​ ಪ್ರಮುಖ ಪಾತ್ರಧಾರಿಗಳು. ಇವರಿಗೆ ಸಹಾಯ ಆಯುಕ್ತ ಮಂಜುನಾಥ್ ಕೂಡ​ ಸಾಥ್​ ಕೊಡುತ್ತಿರೋದು ಸ್ಪಷ್ಟವಾಗಿದೆ. ಲಂಚ ಕೊಡದಿದ್ದರೆ ಭೂಮಿ ಕಳದುಕೊಂಡವರಿಗೆ ಪರಿಹಾರವೇ ಸಿಗುತ್ತಿಲ್ಲ. ಅವರನ್ನು ಅಲೆದಾಡಿಸಿ ಹೈರಾಣಾಸುತ್ತಿದ್ದಾರೆ ಲಜ್ಜೆಗೆಟ್ಟ ಅಧಿಕಾರಿಗಳು. ಇಂಥಾ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಕೊಡಬೇಕಾದ ಜನಪ್ರತಿನಿಧಿಗಳು ಅವರ ರಕ್ಷಣೆಗೆ ನಿಂತಿದ್ದಾರೆ ಎನ್ನುವ ಆರೋಪ ರೈತರದ್ದು. 

ಮಂಗಳೂರು(ಅ.22): ಹಾನಸ - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಆಗ್ತಿರುವುದು ಉತ್ತಮ ವಿಚಾರ. ಆದರೆ ತಲೆ ತಗ್ಗಿಸುವ ವಿಚಾರ ಎಂದರೆ ಹೈವೇ ಹೆಸರಲ್ಲಿ ಭೂಸ್ವಾಧೀನ ಅಧಿಕಾರಿಗಳು ಭರ್ಜರಿ ಕಮಿಷನ್​ ದಂಧೆಗೆ ಇಳಿದುಬಿಟ್ಟಿದ್ದಾರೆ. ರೈತರನ್ನು ಹಿಂಸಿಸಿ ಲಂಚ ಪೀಕುವ ಆಘಾತಕಾರಿ ಅಂಶ ನಮ್ಮ ಕವರ್'​ಸ್ಟೋರಿ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ.

ರಾಷ್ಟ್ರೀಯ ಹೆದ್ದಾರಿ 48ರ ಹಾಸನ ಮಂಗಳೂರು ರಸ್ತೆ ಅಗಲೀಕರಣ ಹೆಸರಲ್ಲಿ ಭರ್ಜರಿ ಲೂಟಿಯಾಗುತ್ತಿದೆ. ಭೂಮಿ, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡುತ್ತದೆ. ಆದರೆ ಪರಿಹಾರ ಕೊಡುವ ಅಧಿಕಾರಿಗಳು ಸಂತ್ರಸ್ತರಿಂದ 2 ರಿಂದ 10 ಪರ್ಸೆಂಟ್​ ಕಮಿಷನ್ ಪಡೆದು ವಿತರಿಸುವುದು. ಇದು ಕವರ್​ಸ್ಟೋರಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಈ ಕಮಿಷನ್​ ದಂಧೆಯಲ್ಲಿ ಸರ್ವೇಯರ್​ ರಂಗಸ್ವಾಮಿ, ಗಂಗಾಧರ್​ ಪ್ರಮುಖ ಪಾತ್ರಧಾರಿಗಳು. ಇವರಿಗೆ ಸಹಾಯ ಆಯುಕ್ತ ಮಂಜುನಾಥ್ ಕೂಡ​ ಸಾಥ್​ ಕೊಡುತ್ತಿರೋದು ಸ್ಪಷ್ಟವಾಗಿದೆ. ಲಂಚ ಕೊಡದಿದ್ದರೆ ಭೂಮಿ ಕಳದುಕೊಂಡವರಿಗೆ ಪರಿಹಾರವೇ ಸಿಗುತ್ತಿಲ್ಲ. ಅವರನ್ನು ಅಲೆದಾಡಿಸಿ ಹೈರಾಣಾಸುತ್ತಿದ್ದಾರೆ ಲಜ್ಜೆಗೆಟ್ಟ ಅಧಿಕಾರಿಗಳು. ಇಂಥಾ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಕೊಡಬೇಕಾದ ಜನಪ್ರತಿನಿಧಿಗಳು ಅವರ ರಕ್ಷಣೆಗೆ ನಿಂತಿದ್ದಾರೆ ಎನ್ನುವ ಆರೋಪ ರೈತರದ್ದು. 

ಈ ಭಾರೀ ಕಮಿಷನ್​ ದಂಧೆಯ ಬಗ್ಗೆ ಸರ್ಕಾರ ತನಿಖೆ ನಡೆಸಿ ಭ್ರಷ್ಟರಿಗೆ ಶಿಕ್ಷೆ ಕೊಡಬೇಕು. ಇಲ್ಲದಿದ್ದರೆ ಹೈವೇ ದರೋಡೆಕೋರರಿಗೆ ಜನರೇ ಬುದ್ಧಿ ಕಲಿಸುತ್ತಾರೆ.