ಚಿಕ್ಕಬಳ್ಳಾಪುರ (ನ. 11): ಕಳೆದ ಹತ್ತು ದಿನಗಳಿಂದ ನಗರಸಭೆ ಮುಂಭಾಗದಲ್ಲಿ ಜೀವನ ನಡೆಸುತ್ತಿರುವ 20 ವಾಟರ್ ಮೆನ್‍ಗಳ ಕುಟುಂಬ ಬೀದಿಗೆ ಬಿದ್ದಿದೆ.  

15 ತಿಂಗಳಿಂದ ಸಂಬಳ ಇಲ್ಲದೇ ಜೀವನ ನಡೆಸಲು ಕಷ್ಟವಾಗಿ ಶಿಡ್ಲಘಟ್ಟ ನಗರಸಭೆ ಮುಂಭಾಗದಲ್ಲಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ನಗರಸಭೆ ಮತ್ತು ಗುತ್ತಿಗೆದಾರರ ಜಟಾಪಟಿಯಲ್ಲಿ 15 ತಿಂಗಳಿಂದ ಸಂಬಳ ಇಲ್ಲದೆ ನೌಕರರು ನರಕ ಯಾತನೆ ಅನುಭವಿಸುತ್ತಿದ್ದಾರೆ. 

ನಗರಸಭೆ ಅಧಿಕಾರಿಗಳು ಬಿಲ್ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ, ಗುತ್ತಿಗೆದಾರರು ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಇಬ್ಬರ ನಡುವಿನ ಕೆಸರೆರಚಾಟದಲ್ಲಿ ಕೂಲಿ ಕಾರ್ಮಿಕರು ನರಳಾಟ ಅನುಭವಿಸುತ್ತಿದ್ದಾರೆ.  ಹತ್ತು ದಿನಗಳಿಂದ ಬೀದಿಯಲ್ಲೇ ಜೀವನ ನಡೆಸುತ್ತಿದ್ದರೂ ಕನಿಷ್ಟ ಸೌಜನ್ಯಕ್ಕೂ ಯಾರೊಬ್ಬರೂ ಬಂದಿಲ್ಲ. ಇಲ್ಲಿ ಮಲಗಿದರೆ ಪೊಲೀಸರನ್ನು ಕರೆಸಿ ಹೊರ ಹಾಕಿಸುವುದಾಗಿ  ಕಮಿಷನರ್ ಹೇಳಿದ್ದಾರೆ. 

ಆಸ್ಪತ್ರೆಗೂ ಕಟ್ಟಲು ಹಣವಿಲ್ಲದೆ ನವೀನ್ ಎಂಬುವವರ 5ತಿಂಗಳ ಹಸುಗೂಸು ಸಾವನ್ನಪ್ಪಿದೆ.