ನಡುರಸ್ತೆಯಲ್ಲೇ ನಿರ್ಗತಿಕನ ಗಡ್ಡ ಬೋಳಿಸಿದ ಪೊಲೀಸ್: ಕಾರಣ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 4:06 PM IST
Officer helps homeless man shave so he can apply for McDonald's job
Highlights

ಈ ಪೊಲೀಸಪ್ಪನ ವರ್ತನೆಗೆ ಜನ ತಬ್ಬಿಬ್ಬು

ನಿರ್ಗತಿಕನ ಗಡ್ಡ ಬೋಳಿಸಿದ ಪೊಲೀಸ್ ಅಧಿಕಾರಿ

ಸಂದರ್ಶನಕ್ಕೆ ಹೋಗಲು ದುಡ್ಡಿಲ್ಲದವನಿಗೆ ಖಾಕಿ ಹೆಲ್ಪ್

ಮ್ಯಾಕ್‌ಡೋನಾಲ್ಡ್ ಗೆ ಸಂದರ್ಶನಕ್ಕೆ ಹೊರಟಿದ್ದ ನಿರ್ಗತಿಕ

ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಭಾರೀ ಪ್ರಶಂಸೆ

ಫ್ಲೋರಿಡಾ(ಜು.24): ಎಲ್ಲ ಪೊಲೀಸರೂ ಜನಸಾಮಾನ್ಯರ ಜೊತೆ ಖಡಕ್ ಆಗಿಯೇ ವರ್ತಿಸುತ್ತಾರೆ ಅಂತಾ ನೀವು ತಿಳಿದಿದ್ದರೆ ಅದು ಖಂಡಿತ ತಪ್ಪು ಕಲ್ಪನೆ. ಫ್ಲೋರಿಡಾದ ಪೊಲೀಸ್ ಅಧಿಕಾರಿ ನಿರ್ಗತಿಕನೋರ್ವನಿಗೆ ಶೇವಿಂಗ್ ಮಾಡಿರುವ ವಿಡಿಯೋ ಇದಕ್ಕೆ ಪುಷ್ಠಿ ಒದಗಿಸಿದೆ.

ಹೌದು, ಫ್ಲೋರಿಡಾ ಪೊಲೀಸ್ ಇಲಾಖೆಯ ಅಧಿಕಾರಿ ಕಾರ್ಲಸನ್, ನಿರ್ಗತಿಕನಿಗೆ ಕೆಲಸ ಸಿಗಲಿ ಎಂಬ ಆಶಯದಿಂದ ಆತನಿಗೆ ಶೇವಿಂಗ್ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ನಿರ್ಗತಿಕನೋರ್ವ ಕೆಲಸಕ್ಕಾಗಿ ಮ್ಯಾಕ್‌ಡೋನಾಲ್ಡ್ ನಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಸಂದರ್ಶನಕ್ಕಾಗಿ ಸಿದ್ಧವಾಗಲು ಆತನ ಬಳಿ ಹಣ ಕೂಡ ಇರಲಿಲ್ಲ.

ವಿಪರೀತವಾಗಿ ಬೆಳೆದ ಗಡ್ಡ ತೆಗೆಸಲು ಕೂಡ ಆತನ ಬಳಿ ಹಣ ಇರಲಿಲ್ಲ. ಇದನ್ನು ಮನಗಂಡ ಪೊಲೀಸ್ ಅಧಿಕಾರಿ ಕಾರ್ಲಸನ್, ತಾವೇ ಖುದ್ದಾಗಿ ಆತನ ಶೇವಿಂಗ್ ಮಾಡಿ ಸಂದರ್ಶನಕ್ಕೆ ಬಿಟ್ಟು ಬಂದಿದ್ದಾರೆ. ಕಾರ್ಲಸನ್ ಅವರ ಮಾನವೀಯತೆಗೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

loader