-ವಿಚಿತ್ರ ಹೇರ್ ಸ್ಟೈಲ್ ಮಾಡಿದ್ದ ಯುವಕರಿಗೆ ಪೊಲೀಸರಿಂದ ಸಖತ್ ಕ್ಲಾಸ್ -ಕೂದಲು ಕತ್ತರಿಸಿದ ಮಾಲೂರು ಪೊಲೀಸ್ -ಕಾನೂನು ಅರಿವು ಮೂಡಿಸಲು ಮುಂದಾದ ಪೊಲೀಸರು

ಮಾಲೂರು (ಆ. 07): ದಿಢೀರ್ ಕಾರ್ಯಾಚರಣೆ ನಡೆಸಿದ ಸ್ಥಳೀಯ ಪೊಲೀಸರು ವಿಚಿತ್ರ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದ ಹಾಗೂ ಗಡ್ಡಬಿಟ್ಟಿದ್ದ ಕೆಲ ಯುವಕರು ಮತ್ತು ಪೋಕರಿಗಳನ್ನು ಹಿಡಿದು, ತಲೆ ಬೋಳಿಸಿ ಕಳುಹಿಸಿದ ಘಟನೆ ಸೋಮವಾರ ನಡೆದಿದೆ.

ಕಳೆದ ಗುರುವಾರ ಪಟ್ಟಣದಲ್ಲಿ ನಡೆದ ವಿದ್ಯಾರ್ಥಿನಿ ರಕ್ಷಿತಾಳ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪುಂಡ, ಪೋಕರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು, ವಿಚಿತ್ರ ಹೇರ್ ಸ್ಟೈಲ್ ಹೊಂದಿದ್ದ ಯುವಕರನ್ನು ಕರೆತಂದು ತಲೆ ಬೋಳಿಸಿ ಕಳುಹಿಸಿದ್ದಾರೆ. ಅಲ್ಲದೇ ಮತ್ತೆ ವಿಚಿತ್ರವಾಗಿ ಕೂದಲು ಬಿಟ್ಟುಕೊಂಡು ಓಡಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಇನ್ಸ್‌ಪೆಕ್ಟರ್ ಸತೀಶ್, ಯುವಕರಲ್ಲಿ ಶಿಸ್ತು ಹಾಗೂ ಕಾನೂನಿನ ಬಗ್ಗೆ ಭಯ ಇರಲಿ ಎಂಬ ಉದ್ದೇಶದಿಂದ ಈ ರೀತಿ ತಲೆ ಬೋಳಿಸಲಾಗಿದೆ. ಇದಕ್ಕೆ ಪೋಷಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ವೀಲ್ಹಿಂಗ್ ಮಾಡುತ್ತಿರುವವರ ವಿರುದ್ಧವೂ ಸಮರ ಸಾರಲಾಗಿದೆ ಎಂದರು.