ಬೆಂಗಳೂರು (ನ.08):  ಇಂದು ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಸಿಎಂ ಇಬ್ರಾಹಿಂ ವಿರುದ್ಧ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿಎಂ ಆಪ್ತ ಮರಿಗೌಡನ ವಿರುದ್ಧ ಅಮಾನತು ಆದೇಶ ವಾಪಸ್ ಪಡೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವನಿಂದ ಪಕ್ಷಕ್ಕೆ ಸಾಕಷ್ಟು ನಷ್ಟವಾಗಿದೆ ಎಂದರು. ಅಮಾನತು ವಾಪಸ್ ಪಡೆಯಲು ಅವಸರ ಮಾಡಿರೋದು ಆಕ್ರೋಶಕ್ಕೆ ಕಾರಣವಾಗಿದೆ. 

ಇಬ್ರಾಹಿಂಗೆ ನೋಟಿಸ್ ನೀಡುವಂತೆ ಸಭೆಯಲ್ಲಿ ಆಗ್ರಹಪಡಿಸಲಾಗಿದೆ.