ಆದರೆ, ಈ ಬಗ್ಗೆ ಮೊದಲಿಗೆ ಪ್ರೇಕ್ಷಕರ ಗಮನಕ್ಕೆ ಬಂದಿರಲಿಲ್ಲ.

ನ್ಯೂಯಾರ್ಕ್(ಫೆ.25): ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಹಿರಿಯ ಪುತ್ರಿಯೊಂದಿಗೆ ಅರ್ಥರ್ ಮಿಲ್ಲರ್ ಅಭಿನಯದ ‘ದ ಪ್ರಿನ್ಸ್’ ಎಂಬಬ್ರಾಡ್‌ವೇ ಶೋ ಅನ್ನು ವೀಕ್ಷಿಸಿದರು. ಸಾಮಾನ್ಯ ಪ್ರೇಕ್ಷಕರ ಕುರ್ಚಿಯಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಪುತ್ರಿ ಮಾಲಿಯಾ ಮತ್ತು ಮಾಜಿ ಸಲಹೆಗಾರ ವಾಲೆರಿ ಜಾರೆಟ್‌ರನ್ನು ಕಂಡ ಸಹ ಪ್ರೇಕ್ಷಕರು ಆಶ್ಚರ್ಯ ವ್ಯಕ್ತಪಡಿಸಿದರು. ಥಿಯೇಟರ್ ಸ್ಟೇಜ್‌ನ ಹಲವು ಸೀಟುಗಳ ಹಿಂಬದಿಯಲ್ಲಿ ಸಾಮಾನ್ಯ ಪ್ರೇಕ್ಷಕರಂತೆ ಒಬಾಮ ಕುಳಿತಿದ್ದರು. ಆದರೆ, ಈ ಬಗ್ಗೆ ಮೊದಲಿಗೆ ಪ್ರೇಕ್ಷಕರ ಗಮನಕ್ಕೆ ಬಂದಿರಲಿಲ್ಲ. ಆದರೆ, ಒಬಾಮ ತಮ್ಮ ಜತೆ ಥಿಯೇಟರ್‌ನಲ್ಲಿರುವುದು ಇಂಟರ್ಮಿಷನ್ ವೇಳೆ ಸ್ನೇಹಿತರೊಬ್ಬರಿಂದ ತಿಳಿಯಿತು ಎಂದು ಪ್ರೇಕ್ಷಕಿಯೊಬ್ಬರು ಹೇಳಿದ್ದಾರೆ.