ರಾಜಕೀಯ ವಿರೋಧಿಗಳಾಗಿರುವ ಅವರಿಬ್ಬರ ಸಭೆ ಕೇವಲ 15 ನಿಮಿಷಗಳಿಗೆ ನಿಗದಿಯಾಗಿತ್ತು.
ವಾಷಿಂಗ್ಟನ್ (ನ.14): ಚುನಾವಣೆಯ ಬಳಿಕ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ ಸಭೆ ನಡೆಯಿತು.
ರಾಜಕೀಯ ವಿರೋಧಿಗಳಾಗಿರುವ ಅವರಿಬ್ಬರ ಸಭೆ ಕೇವಲ 15 ನಿಮಿಷಗಳಿಗೆ ನಿಗದಿಯಾಗಿತ್ತು. ಆದರೆ ಸಭೆ 90 ನಿಮಿಷಗಳವರೆಗೂ ಮುಂದುವರೆಯಿತು ಎನ್ನಲಾಗಿದೆ.
ಇತ್ತೀಚೇಗಷ್ಟೇ ಮುಗಿದ ಚುನಾವಣೆಯಲ್ಲಿ ಟ್ರಂಪ್ ಹಾಗೂ ಒಬಾಮಾ ಪರಸ್ಪರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
