ಅಧ್ಯಕ್ಷೀಯ ಅವಧಿ ಮುಗಿದ ಬಳಿಕ ಬರಾಕ್ ಒಬಾಮಾ  ಮಾಧ್ಯಮ ಕ್ಷೇತ್ರದಲ್ಲಿ ಕೈಹಾಕಿಲಿದ್ದಾರೆ. ತಮ್ಮದೇ ಆದ ಡಿಜಿಟಲ್ ಮಾಧ್ಯಮ ಕಂಪನಿಯನ್ನು ಆರಂಭಿಸುವ ಬೃಹತ್ ಯೋಜನೆಗಳನ್ನು ಹಾಕಿಕೊಂಡಿದ್ದಾರರೆಂದು ಮೈಕ್ ಎಂಬ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಾಷಿಂಗ್ಟನ್ (ಡಿ.03): ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಅವಧಿ ಮುಗಿದ ಬಳಿಕ ಮುಂದೇನು ಮಾಡಲಿದ್ದಾರೆ ಎಂಬ ಚರ್ಚೆ ಅಮೆರಿಕಾ ಮಾಧ್ಯಮಗಳಲ್ಲಿ ನಡೆಯುತ್ತಿದ್ದು ಆ ಕುರಿತು ಕುತೂಹಲ ಹುಟ್ಟು ಹಾಕಿದೆ.

ಅಧ್ಯಕ್ಷೀಯ ಅವಧಿ ಮುಗಿದ ಬಳಿಕ ಬರಾಕ್ ಒಬಾಮಾ ಮಾಧ್ಯಮ ಕ್ಷೇತ್ರದಲ್ಲಿ ಕೈಹಾಕಿಲಿದ್ದಾರೆ. ತಮ್ಮದೇ ಆದ ಡಿಜಿಟಲ್ ಮಾಧ್ಯಮ ಕಂಪನಿಯನ್ನು ಆರಂಭಿಸುವ ಬೃಹತ್ ಯೋಜನೆಗಳನ್ನು ಹಾಕಿಕೊಂಡಿದ್ದಾರರೆಂದು ಮೈಕ್ ಎಂಬ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಬಗ್ಗೆ ಅವರು ಫೇಸ್’ಬುಕ್ ಸಿಇಓ ಮಾರ್ಕ್ ಝುಕರ್ಬರ್ಗ್ ಜತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಆದರೆ ಶ್ವೇತಭವನದ ಅಧಿಕಾರಿಗಳು ಈ ವಿಷಯವನ್ನು ನಿರಾಕರಿಸಿದ್ದಾರೆ. ಅಂತಹ ಯಾವುದೇ ಯೋಜನೆಗಳನ್ನು ಒಬಾಮಾ ಹೊಂದಿಲ್ಲವೆಂದು ಅವರು ಹೇಳಿದ್ದಾರೆ.