ಭಾರತದ ಬಹುತೇಕ ಮೊಬೈಲ್ ಬಳಕೆದಾರರು ವಾಟ್ಸಾಪ್ ಅಕೌಂಟ್ ಹೊಂದಿದ್ದಾರೆ ಎಂದು ಕೆಲ ಸಮೀಕ್ಷೆಗಳು ಹೇಳುತ್ತವೆ.

ನವದೆಹಲಿ(ಫೆ. 24): ಭಾರತದಲ್ಲಿ 200 ಮಿಲಿಯನ್, ಅಂದರೆ 20 ಕೋಟಿಯಷ್ಟು ಜನರು ವಾಟ್ಸಾಪ್ ಬಳಸುತ್ತಿದ್ದಾರಂತೆ. ಈ ಅಂಕಿ-ಅಂಶವನ್ನು ನೀಡಿದ್ದು ವಾಟ್ಸಾಪ್'ನ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್. ದಿಲ್ಲಿ ಐಐಟಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ ಬ್ರಿಯಾನ್ ಅವರು ಈ ಮಾಹಿತಿ ಹೊರಗೆಡವಿದರು. ಭಾರತದಲ್ಲಿ ಅಗಾಧ ಸಂಖ್ಯೆಯಲ್ಲಿ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, ಈ ದೇಶದ ಬೆಳವಣಿಗೆಯಲ್ಲಿ ಯಾವ್ಯಾವ ರೀತಿಯಲ್ಲಿ ಕೊಡುಗೆ ನೀಡಬಹುದು ಎಂಬ ಕುರಿತೂ ಕಾರ್ಯಕ್ರಮದಲ್ಲಿ ಸಂವಾದ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ವಾಟ್ಸಾಪ್ ಸಾಕಷ್ಟು ಹೊಸ ಫೀಚರ್ ಮತ್ತು ಅಪ್'ಡೇಟ್'ಗಳನ್ನು ನೀಡುತ್ತಿದೆ. ಭಾರತದ ಬಹುತೇಕ ಮೊಬೈಲ್ ಬಳಕೆದಾರರು ವಾಟ್ಸಾಪ್ ಅಕೌಂಟ್ ಹೊಂದಿದ್ದಾರೆ ಎಂದು ಕೆಲ ಸಮೀಕ್ಷೆಗಳು ಹೇಳುತ್ತವೆ.