ಕರ್ನಾಟಕ ಹೌಸಿಂಗ್ ಬೋರ್ಡ್ ಅಧಿಕಾರಿಗಳ ಮಾಡಿದ ಯಡವಟ್ಟಿನಿಂದ ನೂರಾರು ಜನರು ಬೀದಿಗೆ ಬಿಳುವಂತಾಗಿದೆ. ವಿವಾದಿತ ಜಾಗವನ್ನ  ಕರ್ನಾಟಕ ಹೌಸಿಂಗ್ ಬೋರ್ಡ್ ಗ್ರಾಹಕರಿಗೆ  ಮಾರಾಟ ಮಾಡಿ ಎಟ್ಟವಟ್ಟು ಮೈ ಮೇಲೆ ಎಳದುಕೊಂಡಿದೆ. ಕೆಎಚ್ ಬಿಯಿಂದ ಸೂರು ಪಡೆದವರು ಮಾತ್ರ ಅತಂತ್ರರಾಗಿದ್ದಾರೆ. ಅದು ಹೇಗೆ ಅಂತಿರಾ ಈ ಸ್ಟೋರಿ ನೋಡಿ.

ಬೆಳಗಾವಿ(ಅ.06): ಕುಂದಾನಗರಿಯ ನೂರಾರು ಜನರು ಕೆ ಎಚ್ ಬಿ ಯಿಂದ ಅಲೌಟ್ಮೆಂಟ್ ಆದ ಜಾಗವನ್ನ ತೆಗೆದುಕೊಂಡು ಗೋಳಾಡುವಂತಾಗಿದೆ. ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ 26 ಎಕೆರೆಗೂ ಅಧಿಕ ಭೂಮಿಯನ್ನ 2005ರಲ್ಲಿ ಕುರಣಿ ಕುಟುಂಬದಿಂದ ಜಾಗ ಖರೀದಿಸಲಾಗಿತ್ತು. ಆದ್ರೆ ಕುರಣಿ ಸಹೋದರರು ಪೀತ್ರಾರ್ಜಿತ ಆಸ್ತಿಯಲ್ಲಿ ಸಹೋದರಿ ಕಮಲಾ ಎಂಬುವರಿಗೆ ಆಸ್ತಿ ನೀಡಿರುವುದಿಲ್ಲ. ಇದನ್ನ ಪ್ರಶ್ನಿಸಿ ಕಮಲಾ 2004ರಲ್ಲಿ ಬೆಳಗಾವಿಯ 2ನೇ ಹಿರಿಯ ಸಿವಿಎಲ್ ನ್ಯಾಯಾಲಯದ ಮೊರೆ ಹೋಗಿದ್ದರು.

ಇದೀಗ, ಬೆಳಗಾವಿ ಸಿವಿಎಲ್ ನ್ಯಾಯಾಲಯ ಕುರಣಿ ಸಹೋದರರು ಕರ್ನಾಟಕ ಹೌಸಿಂಗ್ ಬೋರ್ಡ್ ಗೆ ಮಾರಾಟ ಮಾಡಿದ್ದನ್ನ ರದ್ದು ಪಡಿಸಿ ಆದೇಶ ಹೊರಡಿಸಿದೆ. ಇದರಿಂದ ನಿವೇಶನ ಖರೀದಿಸಿದ್ದ 133 ಗ್ರಾಹಕರು ಅತಂತ್ರರಾಗಿದ್ದಾರೆ.

ಇದರಲ್ಲಿ ಕರ್ನಾಟಕ ಹೌಸ್ಸಿಂಗ್ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ಅಧಿಕಾರಿಗಳ ಹೀಗೆ ವಿವಾದಿತ ಭೂಮಿಯ ಪೂರ್ವಾಪರ್ವ ಪರಿಶೀಲನೆ ನಡೆಸದಿರುವುದು ಗ್ರಾಹಕರಿಗೆ ಮುಳುವಾಗಿದೆ.

ಒಟ್ಟಿನಲ್ಲಿ, ಕರ್ನಾಟಕ ಹೌಸ್ಸಿಂಗ್ ಬೋರ್ಡ್ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಅಮಾಯಕ ಜನರು ಪರದಾಡುವಂತಾಗಿದೆ. ಆದ್ರೆ ಆತಂಕದಲ್ಲಿರುವ ಜನರ ಬೆನ್ನಿಗೆ ನಿಲ್ಲಬೇಕಾದ ಅಧಿಕಾರಿಗಳು ಮಾತ್ರ ತಲೆಕೆಡೆಸಿಕೊಂಡಿಲ್ಲ.