ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಸಾವಿರದಿಂದ 200 ಕ್ಕೆ ಇಳಿಕೆ

370ನೇ ವಿಧಿ ರದ್ದು ಬಳಿಕ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದ್ದು, ಕಣಿವೆಯಲ್ಲಿ ಉಪಟಳ ನೀಡುತ್ತಿದ್ದ ಸಕ್ರೀಯ ಉಗ್ರರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಜಮ್ಮು -ಕಾಶ್ಮೀರ ರಾಜ್ಯಪಾಲರ ಸಲಹೆಗಾರ ಫಾರೂಖ್‌ ಖಾನ್‌ ಹೇಳಿದ್ದಾರೆ. 

Number Of Active Terrorists In Jammu And Kashmir Has Declined after abrogation of Article 370

ಜಮ್ಮು (ಸೆ. 02): 370ನೇ ವಿಧಿ ರದ್ದು ಬಳಿಕ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದ್ದು, ಕಣಿವೆಯಲ್ಲಿ ಉಪಟಳ ನೀಡುತ್ತಿದ್ದ ಸಕ್ರೀಯ ಉಗ್ರರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಜಮ್ಮು -ಕಾಶ್ಮೀರ ರಾಜ್ಯಪಾಲರ ಸಲಹೆಗಾರ ಫಾರೂಖ್‌ ಖಾನ್‌ ಹೇಳಿದ್ದಾರೆ.

ಸಾವಿರ ಸಾವಿರದಷ್ಟಿದ್ದ ಉಗ್ರರ ಸಂಖ್ಯೆ 150 ರಿಂದ 200ಕ್ಕೆ ಇಳಿದಿದ್ದು, ಅವರಿಗೆ ಜೈಲಿಗೆ ಹೋಗುವುದು ಅಥವಾ ಪರಿಣಾಮ ಎದುರಿಸುವ ಅವಕಾಶ ಬಿಟ್ಟರೆ ಬೇರೇನೂ ಉಳಿದಿಲ್ಲ. ಕಳೆದ ಮೂರು ದಶಕಗಳಿಂದ ಜನಸಮಾನ್ಯರು ಉಗ್ರರನ್ನು ಮಟ್ಟಹಾಕುವಲ್ಲಿ ಸೇನಾ ಪಡೆಗಳಿಗೆ ಸಹಾಯ ಮಾಡುತ್ತಿದ್ದು, ಕಾಶ್ಮೀರದಿಂದ ಉಗ್ರವಾದವನ್ನು ಬೇರು ಸಹಿತ ಕಿತ್ತು ಹಾಕುವುದಕ್ಕೆ ಅವರು ನಮಗೆ ಬೆಂಬಲ ನೀಡಲಿದ್ದಾರೆ.

ಜನರ ಬೆಂಬಲವಿಲ್ಲದೇ ಉಗ್ರರ ಸಂಖ್ಯೆ ಇಷ್ಟುಕಡಿಮೆಯಾಗಲು ಸಾಧ್ಯವಾಗುತ್ತಿರಲಿಲ್ಲ .ಈ ವಿಚಾರದಲ್ಲಿ ನಮಗೆ ಕಣ್ಣು ಹಾಗೂ ಕಿವಿ ಅವರೇ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios