ಕರ್ನಾಟಕ ಪಿಯು ಕಾಲೇಜು ಉಪನ್ಯಾಸಕ ಸದಾಶಿವ ಅವರನ್ನು ಮುಖಕ್ಕೆ ಥಳಿಸಿ, ಕಾಲಿನಿಂದ ಜಾಡಿಸಿ ಹೊಡೆಯುವ ಮೂಲಕ ಅವರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ಆಕ್ರೋಶ್ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಕಾಲೇಜು ಕ್ಯಾಂಪಸ್​ ಪ್ರವೇಶಿಸಿದ ಪ್ರತಿಭಟನಾಕಾರರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದರು.

ಧಾರವಾಡ (ನ.28) ಧಾರವಾಡದಲ್ಲಿ ಆಕ್ರೋಶ್ ದಿವಸ್ ಆಚರಣೆ ವೇಳೆ ಎನ್ ಎಸ್ ಯು ಐ ಕಾರ್ಯಕರ್ತರು ಶಾಲಾ ಕಾಲೇಜುಗಳನ್ನು ನಡೆಸಬಾರದೆಂದು ಆಗ್ರಹಿಸಿ ಧಾರವಾಡದ ಕರ್ನಾಟಕ ಕಾಲೇಜಿನ ಪಾಠದ ಕೊಠಡಿಗಳಿಗೆ ನುಗ್ಗಿ ಉಪನ್ಯಾಸಕನನ್ನು ಥಳಿಸಿ ಕಾಲೇಜನ್ನು ಬಂದ್​ ಮಾಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕ ಪಿಯು ಕಾಲೇಜು ಉಪನ್ಯಾಸಕ ಸದಾಶಿವ ಅವರನ್ನು ಮುಖಕ್ಕೆ ಥಳಿಸಿ, ಕಾಲಿನಿಂದ ಜಾಡಿಸಿ ಹೊಡೆಯುವ ಮೂಲಕ ಅವರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ಆಕ್ರೋಶ್ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಕಾಲೇಜು ಕ್ಯಾಂಪಸ್​ ಪ್ರವೇಶಿಸಿದ ಪ್ರತಿಭಟನಾಕಾರರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದರು.

ದೌರ್ಜನ್ಯಕ್ಕೊಳಗಾದ ಉಪನ್ಯಾಸಕ ಸದಾಶಿವ ಅವರ ಮುಖದ ಮೇಲೆಲ್ಲಾ ಗಾಯಗಳಾಗಿದ್ದು, ಇದೀಗ ಕಾಲೇಜಿಗೆ ಧಾರವಾಡ ಉಪ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.