ಇಂಫಾಲ್: ಮಣಿಪುರದಲ್ಲಿ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಲು ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ಶನಿವಾರ ನಿರ್ಧರಿಸಿದೆ. 60 ಸದಸ್ಯಬಲದ ಮಣಿಪುರ ವಿಧಾನಸಭೆಯಲ್ಲಿ ಎನ್‌ಪಿಎಫ್ 4 ಶಾಸಕರನ್ನು ಹೊಂದಿದೆ. 

ಒಂದು ವೇಳೆ ಎನ್‌ಪಿಎಫ್ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡರೂ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. 

28 ಕಾಂಗ್ರೆಸ್ ಸದಸ್ಯರ ಪೈಕಿ 8 ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಬಿಜೆಪಿಯ ಸಂಖ್ಯಾಬಲ 21 ರಿಂದ  29 ಕ್ಕೆ ಏರಿಕೆಯಾಗಿದೆ.

ಅಲ್ಲದೇ ಸರ್ಕಾರಕ್ಕೆ ಎನ್‌ಪಿಪಿ (4), ಎಲ್‌ಜೆಪಿ (1) ಮತ್ತು ಎಐಟಿಸಿ (1) ಸದಸ್ಯರ ಬೆಂಬಲವಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.