ಸರ್ಕಾರಿ ನೌಕರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. 7ನೇ ವೇತನ ಆಯೋಗದ ಅನ್ವಯವಾಗಿ ಸಂಬಳ ಏರಿಕೆ ಮಾಡುವುದಾಗಿ ಸರ್ಕಾರ ಘೋಷಿಸಿದೆ.
ಮುಂಬೈ : ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಶುಭ ಸುದ್ದಿ. ಶೀಘ್ರದಲ್ಲೇ ಅವರ ಇಚ್ಛೆಯಂತೆ ಸರ್ಕಾರವು ವೇತನ ಏರಿಕೆ ಮಾಡುವುದಾಗಿ ಹೇಳಿದೆ.
ವೇತನ ಏರಿಕೆಗಾಗಿ ಆಗಸ್ಟ್ 7 ಮಹಾರಾಷ್ಟ್ರ ನೌಕರರ ಸಂಘಗಳು ಪ್ರತಿಭಟನೆ ನಡೆಸಿದ್ದು, ಇದಾದ ಮರುದಿನವೇ ವೇತನ ಏರಿಕೆಯನ್ನು ಜಾರಿ ಮಾಡುವುದಾಗಿ ಸರ್ಕಾರ ಘೋಷಿಸಿದೆ.
7ನೇ ವೇತನ ಆಯೋಗದ ಅನ್ವಯವಾಗಿ ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಏರಿಕೆಯಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಹೇಳಿದ್ದಾರೆ
2019ರ ಜನವರಿಯಿಂದ ಹೊಸ ವೇತನ ಸಿಗಲಿದ್ದು, 2016ರಿಂದಲೇ ಅನ್ವಯವಾಗಲಿದೆ. ಇದರಿಂದ ಮಹಾರಾಷ್ಟ್ರ ಸರ್ಕಾರದ ಮೇಲೆ ಹೆಚ್ಚುವರಿಯಾಗಿ 21 ಸಾವಿರ ಕೋಟಿ ಹೊರೆಯಾಗಲಿದೆ ಎಂದಿದ್ದಾರೆ.
