Asianet Suvarna News Asianet Suvarna News

ಮೋದಿ ಸರ್ಕಾರದ ಪೆಟ್ರೋಲ್‌ ದರ ಏರಿಕೆ ಸಮಸ್ಯೆಗೆ ಸೌದಿ ಪರಿಹಾರ!

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿದ ಕಾರಣ ಜನಸಾಮಾನ್ಯರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೆರವಿಗೆ ಸೌದಿ ಅರೇಬಿಯಾ, ರಷ್ಯಾ ಮತ್ತು ಅಮೆರಿಕ ದೇಶಗಳು ‘ಧಾವಿಸಿವೆ’. 

Now that oil producers have cleared surplus

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿದ ಕಾರಣ ಜನಸಾಮಾನ್ಯರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೆರವಿಗೆ ಸೌದಿ ಅರೇ ಬಿಯಾ, ರಷ್ಯಾ ಮತ್ತು ಅಮೆರಿಕ ದೇಶಗಳು ‘ಧಾವಿಸಿವೆ’. ಈ ಮೂರೂ ದೇಶಗಳು ತೈಲೋತ್ಪಾದನೆ ಹೆಚ್ಚಳಕ್ಕೆ ಸಮ್ಮತಿ ನೀಡುವುದರೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊನೆಗೂ ಕಚ್ಚಾ ತೈಲ ಬೆಲೆ ಇಳಿಕೆಯ ಹಾದಿಕಂಡುಕೊಂಡಿದೆ. ಹೀಗಾಗಿ ತೈಲ ಬೆಲೆ ಹೊರೆ ಇಳಿಸಲು ನಾನಾ ಮಾರ್ಗ ಹುಡುಕುತ್ತಿದ್ದ ಕೇಂದ್ರ ಸರ್ಕಾರ, ತಕ್ಷಣಕ್ಕೆ ಅಂಥ ಯಾವುದೇ ನಿರ್ಧಾರದಿಂದ ಹಿಂದೆ ಸರಿಯಲು ಅವಕಾಶ ಮಾಡಿಕೊಟ್ಟಿದೆ.

2 ವರ್ಷಗಳ ಹಿಂದೆ ತೈಲ ಉತ್ಪಾದನೆ ದೇಶಗಳು ಭಾರೀ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾದ ಹಿನ್ನೆಲೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ ಕೇವಲ 30 ಡಾಲರ್‌ಗೆ ಇಳಿದಿತ್ತು. ಹೀಗಾಗಿ ಸೌದಿ ಅರೇಬಿಯಾ, ರಷ್ಯಾ ಸೇರಿದಂತೆ ಒಪೆಕ್‌ ರಾಷ್ಟ್ರಗಳು ಉತ್ಪಾದನೆಗೆ ಮಿತಿ ಹಾಕಿಕೊಂಡಿದ್ದವು. ಹೀಗಾಗಿ ಬೆಲೆ ಸತತವಾಗಿ ಏರುಮುಖದಲ್ಲಿ ಸಾಗಿದ್ದು ಈ ವರ್ಷ ಮೇ ಮೊದಲ ವಾರದಲ್ಲಿ ಬ್ಯಾರಲ್‌ಗೆ 80 ಡಾಲರ್‌ಗೆ ತಲುಪಿತ್ತು. ಇದರ ಪರಿಣಾಮ ಭಾರತದ ಮೇಲೂ ಉಂಟಾಗಿ ಜನಸಾಮಾನ್ಯರು ತತ್ತರಿಸಿದ್ದರು. ಮತ್ತೊಂದೆಡೆ ಪೆಟ್ರೋಲ್‌ ಮೇಲೆ ತೆರಿಗೆ ಕಡಿಮೆ ಮಾಡಿದರೆ ಬೊಕ್ಕಸಕ್ಕೆ ಹೊರೆ ಬೀಳಲಿದೆ ಎಂದು ಸರ್ಕಾರವೂ ಸುಮ್ಮನೆ ಕುಳಿತಿತ್ತು.

ಆದರೆ ಇದೀಗ ಸೌದಿ ಅರೇಬಿಯಾ, ರಷ್ಯಾ ಮತ್ತು ಅಮೆರಿಕ ಉತ್ಪಾದನೆ ಹೆಚ್ಚಳಕ್ಕೆ ನಿರ್ಧರಿಸಿವೆ. ಹೀಗಾಗಿ ಕಳೆದ 3 ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸತತವಾಗಿ ಇಳಿಕೆ ಹಾದಿಯಲ್ಲಿ ಸಾಗಿದೆ. ಮೂರು ದಿನದಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ ಅಂದಾಜು 3 ಡಾಲರ್‌ (200 ರು.) ಕಡಿಮೆಯಾಗಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿ ಸರ್ಕಾರ ಇದೆ.

Follow Us:
Download App:
  • android
  • ios