, ಎಂ.ಸಿ.ನಾಣಯ್ಯ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ನನ್ನ ಮತ್ತು ಅವರು ಹಲವು ವರ್ಷಗಳ ಗೆಳೆಯರು ಹಾಗೂ ಅದಲ್ಲದೆ ನಾಣಯ್ಯ ಒಳ್ಳೆಯ ನಾಯಕರು. ನನಗೂ ನಾಣಯ್ಯಗೂ ಉತ್ತಮ ಒಡನಾಟವಿರುವುದರಿಂದ ಭೇಟಿ ನೀಡಲು ಬಂದಿದ್ದೆ
ಕೊಡಗು(ಜ.09): ಜೆಡಿಎಸ್ ಹಿರಿಯ ನಾಯಕ ಎಂ.ಸಿ.ನಾಣಯ್ಯ ಜತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಕಾಂಗ್ರೆಸ್'ಗೆ ಕರೆತರುವ ಪ್ರಯತ್ನ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಮಡಿಕೇರಿ ಪಟ್ಟಣದಲ್ಲಿರುವ ನಾಣಯ್ಯ ನಿವಾಸದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಸಿಎಂ, ತಮ್ಮ ಜೆಡಿಎಸ್ ಗೆಳತನದ ಬಗ್ಗೆ ಮೆಲುಕು ಹಾಕಿದ್ದಾರೆ. ಹಿಂದಿನಿಂದಲೂ ನಾಣಯ್ಯ ಅವರಿಗೆ ಸಿದ್ದರಾಮಯ್ಯ ಅವರೊಂದಿಗೆ ಹೆಚ್ಚಿನ ಬಾಂಧವ್ಯವಿದೆ. ಅಲ್ಲದೆ ಇತ್ತೀಚಿಗೆ ಜೆಡಿಎಸ್ ಬಗ್ಗೆಯೂ ಅತೃಪ್ತರಾಗಿರುವ ಅವರನ್ನು ಕಾಂಗ್ರೆಸ್'ಗೆ ಕರೆತರಬೇಕೆಂದು ಸಿದ್ದರಾಮಯ್ಯ ಅವರಿಗೆ ಬೆಂಬಲಿಗರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ನಾಣಯ್ಯ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಸಿ.ನಾಣಯ್ಯ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ನನ್ನ ಮತ್ತು ಅವರು ಹಲವು ವರ್ಷಗಳ ಗೆಳೆಯರು ಹಾಗೂ ಅದಲ್ಲದೆ ನಾಣಯ್ಯ ಒಳ್ಳೆಯ ನಾಯಕರು. ನನಗೂ ನಾಣಯ್ಯಗೂ ಉತ್ತಮ ಒಡನಾಟವಿರುವುದರಿಂದ ಭೇಟಿ ನೀಡಲು ಬಂದಿದ್ದೆ ಎಂದು ತಿಳಿಸಿದರು.
