ಅನುಮಾನವೇ ಬೇಡ, ರಾಹುಲ್ ಗಾಂಧಿ ನಮ್ಮ ಬಾಸ್

First Published 8, Feb 2018, 11:41 AM IST
Now My Boss Too Let There Be No Doubt About That
Highlights

ಹಿಂದಿನಂತೆಯೇ ನೀವೆಲ್ಲರೂ ರಾಹುಲ್ ಜೊತೆ  ನನಗೆ ನೀಡಿದ್ದ ಉತ್ಸಾಹ,ನಿಷ್ಠೆ ಹಾಗೂ ಸ್ಫೂರ್ತಿಯಿಂದ ಕೆಲಸ ಮಾಡುತ್ತೀರಿ ಎಂಬ ನಂಬಿಕೆ ನನಗಿದೆ’

ನವದೆಹಲಿ(ಫೆ.08): ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಪುತ್ರನೇ ಅಧಿನಾಯಕ ಸ್ಪಷ್ಟ ಹಾಗೂ ಬಹಿರಂಗವಾಗಿ  ಘೋಷಿಸಿದ್ದಾರೆ.
ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇವರು(ರಾಹುಲ್ ಗಾಂಧಿ) ನಮ್ಮ ಮುಖ್ಯಸ್ಥರು, ಇದರಲ್ಲಿ ಯಾವುದೇ ಅನುಮಾನವೇ ಬೇಡ. ಹಿಂದಿನಂತೆಯೇ ನೀವೆಲ್ಲರೂ ರಾಹುಲ್ ಜೊತೆ  ನನಗೆ ನೀಡಿದ್ದ ಉತ್ಸಾಹ,ನಿಷ್ಠೆ ಹಾಗೂ ಸ್ಫೂರ್ತಿಯಿಂದ ಕೆಲಸ ಮಾಡುತ್ತೀರಿ ಎಂಬ ನಂಬಿಕೆ ನನಗಿದೆ’ಎಂದು ತಿಳಿಸಿದರು.
71ವರ್ಷದ ಸೋನಿಯಾ ಗಾಂಧಿ ಅವರು 19 ವರ್ಷಗಳ ಕಾಲ ಎಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಳೆದ ಡಿಸೆಂಬರ್’ನಲ್ಲಿ ರಾಹುಲ್ ಗಾಂಧಿಯವರಿಗೆ ಪಟ್ಟ ಕಟ್ಟಿದ್ದರು.

loader