Omicron Threat : ರೋಗನಿರೋಧಕ ಶಕ್ತಿಯನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯ ಒಮಿಕ್ರಾನ್ ಗೆ ಇದೆ ಎಂದ INSACOG

ರೋಗನಿರೋಧಕವನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯ ಒಮಿಕ್ರಾನ್ ಗೆ ಇದೆ
ಈ ಕುರಿತಾಗಿ ಸ್ಪಷ್ಟ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ದತ್ತಾಂಶ ಲಭ್ಯ
ಭಾರತೀಯ SARS-COV-2 ಜೀನೋಮಿಕ್ಸ್ ಕನ್ಸೋರ್ಟಿಯಾ INSACOG ಹೇಳಿಕೆ
 

now clear experimental and clinical data supporting the very high immune escape potential of Omicron says INSACOG

ನವದೆಹಲಿ (ಡಿ. 30): ಜಾಗತಿಕ ದತ್ತಾಂಶವನ್ನು ಉಲ್ಲೇಖಿಸಿ ಮಾತನಾಡಿರುವ ಭಾರತೀಯ ಸಾರ್ಸ್-ಕೋವ್-2 (SARS-COV-2) ಜೀನೋಮಿಕ್ಸ್ ಕನ್ಸೋರ್ಟಿಯಾ INSACOG, ಒಮಿಕ್ರಾನ್ ವೈರಸ್ ಅತಿಹೆಚ್ಚು ರೋಗ ನಿರೋಧಕ ವ್ಯವಸ್ಥೆಯನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಕುರಿತಾಗಿ ಸ್ಪಷ್ಟ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ದತ್ತಾಂಶ ಲಭ್ಯವಿದೆ ಎಂದು ತಿಳಿಸಿದೆ. ಡೆಲ್ಟಾ ವೈರಸ್ ಗಿಂತ ( Delta variant) ಹೆಚ್ಚಿನ ವೇಗದಲ್ಲಿ ಒಮಿಕ್ರಾನ್ ವೈರಸ್ (Omicron)ಹಬ್ಬಲು ಈ ಅಂಶವೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ. ಕಳೆದ ಒಂದು ವಾರದಲ್ಲಿ ಜಾಗತಿಕವಾಗಿ ಒಮಿಕ್ರಾನ್ ಕೇಸ್ ಗಳಲ್ಲಿ ಶೇ.11 ರಷ್ಟು ಏರಿಕೆಯಾಗಿದೆ. ಇದರ ಬೆನ್ನಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆ(WHO) ಬುಧವಾರ ದೊಡ್ಡ ಎಚ್ಚರಿಕೆಯನ್ನು ನೀಡಿದ್ದು, ಕೋವಿಡ್-19 ನ ಈ ರೂಪಾಂತರವು ಇನ್ನೂ "ಅತ್ಯಂತ ಹೆಚ್ಚಿನ" ಮಟ್ಟದ ಅಪಾಯವನ್ನುಂಟು ಮಾಡಲಿದ್ದು ಮತ್ತು ಆರೋಗ್ಯ ವ್ಯವಸ್ಥೆಯನ್ನೇ ಹದಗೆಡಿಸಬಹುದು ಎಂದಿದೆ.

ಕೋವಿಡ್-19 ಇಂಡಿಯಾ ಟ್ರ್ಯಾಕರ್ (India Covid tracker)ಅನ್ನು ಅಭಿವೃದ್ಧಿಪಡಿಸಿರುವ ಕೆಂಬ್ರಿಡ್ಜ್ ವಿವಿಯ(University of Cambridge) ಜಡ್ಜ್ ಬ್ಯುಸಿನೆಸ್ ಸ್ಕೂಲ್ ನ ಪ್ರೊಫೆಸರ್ ಪೌಲ್ ಕಟ್ಟುಮನ್ (Paul Kattuman) ಈ ಮೇಲ್ ಮೂಲಕ ಕೆಲ ವಿಚಾರಗಳನ್ನು ತಿಳಿಸಿದ್ದು, "ಭಾರತದಲ್ಲಿ ದೈನಂದಿನ ಪ್ರಕರಣಗಳ ವಿಚಾರದಲ್ಲಿ ಸ್ಫೋಟಕ ಬೆಳವಣಿಗೆಯನ್ನು ನೋಡುವ ಸಾಧ್ಯತೆ ಹೆಚ್ಚಾಗಿದೆ. ತೀವ್ರವಾಗಿ ಪ್ರಕರಣವು ಬೆಳೆಯುವ ಹಂತ ತುಲನಾತ್ಮಕವಾಗಿ ಬಹಳ ಚಿಕ್ಕದಾಗಿರುತ್ತದೆ. ಕೆಲವೇ ದಿನಗಳಲ್ಲಿ, ಅಂದರೆ ಬಹುಶಃ ಈ ವಾರದ ಒಳಗೆ ಸೋಂಕುಗಳು ಹೆಚ್ಚಾಗಲು ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. ಅದರೊಂದಿಗೆ ದೈನಂದಿನ ಪ್ರಕರಣಗಳು ಎಷ್ಟು ಹೆಚ್ಚಾಗಬಹುದು ಎನ್ನುವುದನ್ನು ಸದ್ಯದ ಮಟ್ಟಿಗೆ ಅಂದಾಜು ಮಾಡುವುದು ಕಷ್ಟ ಎಂದಿದ್ದಾರೆ.
ಇಂಡಿಯಾ ಕೋವಿಡ್ ಟ್ರ್ಯಾಕರ್ ಅನ್ನು ಅಭಿವೃದ್ಧಿ ಮಾಡಿರುವ  ಪ್ರೊಫೆಸರ್ ಕುಟ್ಟುಮನ್ ಹಾಗೂ ಅವರ ಸಂಶೋಧಕರ ಟೀಮ್, ಭಾರತದಲ್ಲಿ(India) ಸೋಂಕಿನ ಪ್ರಮಾಣ ಒಮ್ಮೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಟ್ರ್ಯಾಕರ್ ಡಿಸೆಂಬರ್ 24 ರಂದು ನೀಡಿದ ಟಿಪ್ಪಣಿಯಲ್ಲಿ ಆರು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣದ ಬಗ್ಗೆ ಹೆಚ್ಚಿನ ಕಾಳಜಿ ನೀಡಬೇಕಿದೆ ಎಂದು ತಿಳಿಸಿದ್ದು, ಹೊಸ ಪ್ರಕರಣಗಳ ಹೊಂದಾಣಿಕೆ ಬೆಳವಣಿಗೆ ದರವು ಶೇಕಡಾ 5ಅನ್ನು ಮೀರಿದೆ. ಡಿಸೆಂಬರ್ 26ರ ವೇಳೆಗೆ ಇದು 11 ರಾಜ್ಯಗಳಿಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ 8 ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯವು (Union health ministry) ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 9195 ಕೋವಿಡ್-19 ಕೇಸ್ ಗಳು ದಾಖಲಾಗಿವೆ ಎಂದು ಹೆಳಿದೆ. ಇದು ಕಳೆದ ಮೂರು ವಾರಗಳಲ್ಲಿ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಕೇಸ್ ಗಳಾಗಿವೆ. ಒಟ್ಟಾರೆ ದೇಶದಲ್ಲಿ ಕೋವಿಡ್-19 ಸೋಂಕಿನ ಪ್ರಮಾಣದ ಸಂಖ್ಯೆ 34.8 ಮಿಲಿಯನ್ ಆಗಿದ್ದು, ಸಾಂಕ್ರಾಮಿಕ ವೈರಸ್ ಗೆ ಈಗಾಗಲೇ  480,592 ಮಂದಿ ಬಲಿಯಾಗಿದ್ದಾರೆ.

Corona Update: ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಇರಲಿ ಎಚ್ಚರ
21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಈವರೆಗೂ 810 ಒಮಿಕ್ರಾನ್ ಕೇಸ್ ಗಳನ್ನು ಮಾತ್ರವೇ ಗುರುತಿಸಲಾಗಿದ್ದರೂ, ಮತ್ತೊಂದು ದೊಡ್ಡ ಪ್ರಮಾಣದ ಕೋವಿಡ್-19 ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಬದ್ಧವಾಗಿವೆ. ದೆಹಲಿಯಲ್ಲಿ ಈವರೆಗೂ ಗರಿಷ್ಠ 238 ಪ್ರಕರಣಗಳು ದಾಖಲಾಗಿದ್ದರೆ, ಮಹಾರಾಷ್ಟ್ರದಲ್ಲಿ 167 ಹಾಗೂ ಗುಜರಾತ್ ನಲ್ಲಿ 97 ಪ್ರಕರಣಗಳು ದಾಖಲಾಗಿವೆ.

Omicron Threat: ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಮೂರುವರೆ ತಿಂಗಳ ಬಳಿಕ 400 ಕೇಸ್‌..!
ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬ್‌ ಕೂಡ ಮೊದಲ ಒಮಿಕ್ರಾನ್ ಪ್ರಕರಣವನ್ನು ರಾಜ್ಯದಲ್ಲಿ ಘೋಷಣೆ ಮಾಡಿದೆ. ಈ ತಿಂಗಳ ಆರಂಭದಲ್ಲಿ ಸ್ಪೇನ್ ನಿಂದ ಬಂದಿದ್ದ 36 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಡಿಸೆಂಬರ್ 4 ರಂದು ಭಾರತಕ್ಕೆ ಬಂದಿದ್ದ ವ್ಯಕ್ತಿ, ನವನ್ ಶಹ್ರ್ ನಲ್ಲಿ ಸಂಬಂಧಿಗಳನ್ನು ಭೇಟಿ ಮಾಡಿದ್ದ. ಬಂದ ದಿನವೇ ಅವರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿತ್ತಾದರೂ ಅಂದು ನೆಗೆಟಿವ್ ಫಲಿತಾಂಶ ಬಂದಿತ್ತು. ಡಿಸೆಂಬರ್ 12 ರಂದು ನಡೆದ ಇನ್ನೊಂದು ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ.

Latest Videos
Follow Us:
Download App:
  • android
  • ios