ತಾಜ್‌ಮಹಲ್‌ಗೆ ಬರುವ ಪ್ರವಾಸಿಗರು ಪ್ರವೇಶ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು, ಸೂರ್ಯೋದಯಕ್ಕೂ 45 ನಿಮಿಷ ಮೊದಲೆ ಟಿಕೆಟ್‌ ಕೌಂಟರ್‌ ಬಾಗಿಲು ತೆರೆಯಲು ಸರ್ಕಾರ ನಿರ್ಧರಿಸಿದೆ.

ಲಖನೌ: ತಾಜ್‌ಮಹಲ್‌ಗೆ ಬರುವ ಪ್ರವಾಸಿಗರು ಪ್ರವೇಶ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು, ಸೂರ್ಯೋದಯಕ್ಕೂ 45 ನಿಮಿಷ ಮೊದಲೆ ಟಿಕೆಟ್‌ ಕೌಂಟರ್‌ ಬಾಗಿಲು ತೆರೆಯಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಮಾತನಾಡಿದ ಉತ್ತರಪ್ರದೇಶದ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ ‘ತಾಜ್‌ಮಹಲ್‌ ಪ್ರವೇಶ್‌ ಟಿಕೆಟ್‌ ದ್ವಾರವನ್ನು ಸೂರ್ಯೋದಯಕ್ಕೂ 45 ನಿಮಿಷ ಮೊದಲು ತೆರೆದು, ಸೂರ್ಯಾಸ್ತಕ್ಕಿಂತ 30 ನಿಮಿಷ ಬೇಗ ಮುಚ್ಚಲಾಗುತ್ತದೆ.

ಈ ಮೊದಲು ಟಿಕೆಟ್‌ ಕೌಂಟರ್‌ ಮತ್ತು ತಾಜ್‌ಮಹಲ್‌ ಗೇಟ್‌ ಎರಡನ್ನು ಕೂಡ ಸೂರ್ಯೋದಯದ ನಂತರವೇ ತೆರೆದು, ಸೂರ್ಯಾಸ್ತದ ವೇಳೆಗೆ ಮುಚ್ಚಲಾಗುತ್ತಿತ್ತು ಎಂದರು.