ಆಹಾರಗಳ ಬೆಲೆ ಇಳಿಕೆ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಮುಖಂಡ ಅಹಮದ್‌ ಪಟೇಲ್‌ ಎಡವಟ್ಟು ಮಾಡಿಕೊಂಡಿದ್ದಾರೆ.

ನವದೆಹಲಿ: ಆಹಾರಗಳ ಬೆಲೆ ಇಳಿಕೆ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಮುಖಂಡ ಅಹಮದ್‌ ಪಟೇಲ್‌ ಎಡವಟ್ಟು ಮಾಡಿಕೊಂಡಿದ್ದಾರೆ. 2014ರ ಬಳಿಕ ಸಗಟು ಆಹಾರ ದರಗಳು ಇಳಿಕೆಯಾಗಿರುವುದರಿಂದ ರೈತರು ಒತ್ತಡಕ್ಕೆ ಸಿಲುಕಿದ್ದಾರೆ.

ಆಹಾರ ದರಗಳು ಕೇವಲ .3.6ರಷ್ಟುಏರಿಕೆಯಾಗಿರುವುದರಿಂದ ಹಣದುಬ್ಬರ ಇಳಿಕೆಯನ್ನು ರೈತರ ಸಹಿಸಿಕೊಳ್ಳಬೇಕಾಗಿ ಬಂದಿದೆ ಎಂದು ಅಹಮದ್‌ ಪಟೇಲ್‌ ಟ್ವೀಟ್‌ ಮಾಡಿದ್ದಾರೆ.

ಇದೇ ವಿಷಯವಾಗಿ ಅಹಮದ್‌ ಪಟೇಲ್‌ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಜಯಂತ್‌ ಸಿನ್ಹಾ, ಯುಪಿಎ ಸರ್ಕಾರದಲ್ಲಿ ಆಹಾರ ಹಣದುಬ್ಬರ ಅಧಿಕವಾಗಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಕ್ಕೆ ಅಹಮದ್‌ ಪಟೇಲ್‌ ಅವರಿಗೆ ಧನ್ಯವಾದಗಳು. ಎನ್‌ಡಿಎ ಆಹಾರ ಸರ್ಕಾರ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸಿದೆ. ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Scroll to load tweet…