ವೀರ್ಯಾಣು ಸಂಗ್ರಹ ಇಂದಿನ ಅನಿವಾರ್ಯತೆಯಾ..? ವೀರ್ಯವನ್ನು 200 ವರ್ಷದ ವರೆಗೆ ಸಂಗ್ರಹಿಸಿಡಬಹುದು

news | Monday, February 19th, 2018
Suvarna Web Desk
Highlights

ಸ್ಖಲನದ ಮೂಲಕ ಅಥವಾ ನೇರ ಟೆಸ್ಟಿಸ್‌'ನಿಂದ ವೈದ್ಯರು ವೀರ್ಯ ಸಂಗ್ರಹಿಸುತ್ತಾರೆ. ಬಳಿಕ ಮೈಕ್ರೋಸ್ಕೋಪ್ ಮೂಲಕ ಇದರ ಆರೋಗ್ಯ ಹಾಗೂ ಫಲವತ್ತತೆಯನ್ನು ಪರೀಕ್ಷಿಸುತ್ತಾರೆ. ಆರೋಗ್ಯವಂತ ವೀರ್ಯಾಣುವನ್ನು ಮೈನಸ್ 170 ಡಿಗ್ರಿಯಲ್ಲಿ ಹೆಪ್ಪುಗಟ್ಟಿಸಿ ಸುರಕ್ಷಿತವಾಗಿಡುತ್ತಾರೆ. ಇದು ಸಂಗ್ರಹ ಕ್ರಮ. ಇದನ್ನು 200 ವರ್ಷದವರೆಗೆ ಬೇಕಾದ್ರೂ ಹೀಗೇ ಇಡಬಹುದು.

ಕಳೆದವಾರ ಬಜೆಟ್‌'ಗಿಂತ ಹೆಚ್ಚು ಜನರ ಬಾಯಲ್ಲಿ ನಲಿದಾಡಿದ್ದು ಸತ್ತಮಗನ ವೀರ್ಯದಿಂದ ತಾಯಿಯೊಬ್ಬಳು ಮೊಮ್ಮಕ್ಕಳನ್ನು ಪಡೆದ ವಿಚಾರ. ಪುಣೆಯ ಶಿಕ್ಷಕಿಯೊಬ್ಬರು ಮೊದಲ ಸಂಗ್ರಹಿಸಿಟ್ಟಿದ್ದ ಅವಿವಾಹಿತ ಮೃತ ಮಗನ ವೀರ್ಯದಿಂದ ಬಾಡಿಗೆ ಗರ್ಭದ ಮೂಲಕ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಪಡೆದರು. ಆ ಮಗನಿಗೆ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾದದ್ದೇ ಕೀಮೋ ಥೆರಪಿಗೂ ಮೊದಲು ವೈದ್ಯರು ಆತನ ವೀರ್ಯ ಸಂಗ್ರಹಿಸಿಟ್ಟುಕೊಳ್ಳಲು ಹೇಳಿದ್ದರು. ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ. ಮೊಮ್ಮಗುವಿಗೆ ಹಂಬಲಿಸುತ್ತಿದ್ದ ಆತನ ತಾಯಿಗೆ ಆಶಾಕಿರಣವಾದದ್ದು ಸಂಗ್ರಹಿಸಿಟ್ಟಿದ್ದ ಮಗನ ವೀರ್ಯ. ಆಕೆ ಅಂಡಾಣು ದಾನಿಯೊಬ್ಬರಿಂದ ಅಂಡಾಣು ಪಡೆದು ಅದನ್ನು ಮಗನ ವೀರ್ಯದೊಂದಿಗೆ ಸಂಯೋಜಿಸಿ ಬಾಡಿಗೆ ಗರ್ಭದಲ್ಲಿಟ್ಟು ಮೊಮ್ಮಗು ಪಡೆದದ್ದೇ ಒಂದು ರೋಚಕ ಕಥೆ.

ವೀರ್ಯ ಸಂಗ್ರಹ ಇಂದಿನ ಅನಿವಾರ್ಯತೆಯಾ?

‘ಬೆಳಗ್ಗೆ ಆಫೀಸ್‌'ಗೆ ಹೋದ ಮಗ ವಾಪಾಸ್ ಬರುವವರೆಗೂ ಎದೆ ಹೊಡ್ಕೊಳ್ತಾ ಇರುತ್ತೆ’ ಅಂತಾರೆ ಬೆಂಗಳೂರಿನ ಗೃಹಿಣಿ. ಮಹಾನಗರಗಳಲ್ಲಿ ವಾಸಿಸುವ ಹೆಚ್ಚಿನವರಿಗೆ ಈ ಭಯ ಇದೆ. ಇದಕ್ಕಿಂತ ದೊಡ್ಡ ಸಮಸ್ಯೆ ಫಲವತ್ತತೆಯದು. ನಮ್ಮ ಜೀವನಶೈಲಿಯಿಂದ ಗಂಡು, ಹೆಣ್ಣಿನ ಫಲವತ್ತತೆಯ ಅವಧಿ ಕಡಿಮೆಯಾಗ್ತಿದೆ. ಹೀಗಿರುವಾಗ ಆರೋಗ್ಯವಂತರಾಗಿರುವಾಗ ಚಿಕ್ಕ ಹರೆಯದಲ್ಲೇ ವೀರ್ಯ ಸಂಗ್ರಹಿಸಿಟ್ಟರೆ ಭವಿಷ್ಯದಲ್ಲಿ ಮಕ್ಕಳಾಗದಿರುವಿಕೆಯಿಂದ ಪಾರಾಗಬಹುದು. ಅಂಡಾಣು ಸಂಗ್ರಹ ವೀರ್ಯ ಸಂಗ್ರಹಕ್ಕಿಂತ ತುಸು ಕಷ್ಟಕರವಾದದ್ದು. ಆದರೆ ಈಗೀಗ 25 ರಿಂದ 45ರ ವಯಸ್ಸಿನೊಳಗೆ ಮೆನೊಪಾಸ್ ಆಗುವ ಭೀತಿ ಹೆಚ್ಚಿರುವ ಕಾರಣ ಹೆಣ್ಮಕ್ಕಳು ಅಂಡಾಣು ಸಂಗ್ರಹಿಸಿಟ್ಟರೆ ಉತ್ತಮ ಅಂತಾರೆ ಕೆಲ ವೈದ್ಯರು.

ವೀರ್ಯ ಸಂಗ್ರಹಣೆ ಹೇಗಾಗುತ್ತದೆ?

ಸ್ಖಲನದ ಮೂಲಕ ಅಥವಾ ನೇರ ಟೆಸ್ಟಿಸ್‌'ನಿಂದ ವೈದ್ಯರು ವೀರ್ಯ ಸಂಗ್ರಹಿಸುತ್ತಾರೆ. ಬಳಿಕ ಮೈಕ್ರೋಸ್ಕೋಪ್ ಮೂಲಕ ಇದರ ಆರೋಗ್ಯ ಹಾಗೂ ಫಲವತ್ತತೆಯನ್ನು ಪರೀಕ್ಷಿಸುತ್ತಾರೆ. ಆರೋಗ್ಯವಂತ ವೀರ್ಯಾಣುವನ್ನು ಮೈನಸ್ 170 ಡಿಗ್ರಿಯಲ್ಲಿ ಹೆಪ್ಪುಗಟ್ಟಿಸಿ ಸುರಕ್ಷಿತವಾಗಿಡುತ್ತಾರೆ. ಇದು ಸಂಗ್ರಹ ಕ್ರಮ. ಇದನ್ನು 200 ವರ್ಷದವರೆಗೆ ಬೇಕಾದ್ರೂ ಹೀಗೇ ಇಡಬಹುದು.

ಸಂಗ್ರಹಿಸಿಟ್ಟ ವೀರ್ಯದಿಂದ ಶಿಶು ರೂಪುಗೊಳ್ಳೋದು ಹೇಗೆ?

ನಾವು ಮಾಂಸವನ್ನು ಫ್ರೀಜರ್‌'ನಲ್ಲಿಟ್ಟು ಬಳಸುವಾಗ ಸಾಮಾನ್ಯ ಉಷ್ಣಾಂಶಕ್ಕೆ ತರುವಂತೆ ಈ ವೀರ್ಯವನ್ನೂ ಫ್ರೀಜರ್‌'ನಿಂದ ಹೊರತೆಗೆದು ಸಾಮಾನ್ಯ ಉಷ್ಣಾಂಶದಲ್ಲಿ ಇಡುತ್ತಾರೆ. ನಂತರ ಅಂಡಾಣುವನ್ನು ಇದಕ್ಕೆ ಸೇರಿಸಿ ಫಲಿತಗೊಳಿಸಲಾಗುತ್ತೆ. 5 ದಿನದಲ್ಲಿ ಇದು ಭ್ರೂಣದ ಹಂತಕ್ಕೆ ಬರುತ್ತದೆ. ನಂತರ ಇದು ದೇಹದ ಉಷ್ಣಾಂಶದಲ್ಲಿ ಇನ್‌ಕ್ಯುಬೆಟರ್‌'ನಲ್ಲಿಡುತ್ತಾರೆ. ಬಳಿಕ ಇದನ್ನು ಐವಿಎಫ್ ತಂತ್ರಜ್ಞಾನದಲ್ಲಿ ಗರ್ಭದೊಳಗೆ ಸೇರಿಸುತ್ತಾರೆ. ಅಲ್ಲಿಂದ ನಂತರ ಸಹಜವಾಗಿ ಭ್ರೂಣ ಬೆಳವಣಿಗೆಯಾಗುತ್ತದೆ.

ವೀರ್ಯ, ಅಂಡ ದಾನಕ್ಕೆ ಹೆಚ್ಚು ಬೇಡಿಕೆ

ಫಲವತ್ತತೆಯ ಸಮಸ್ಯೆ ತೀರಾ ಸಾಮಾನ್ಯವಾಗಿರುವಾಗ ವೀರ್ಯ, ಅಂಡ ದಾನಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕೆಲವರು ಇದನ್ನು ದಾನ ಮಾಡಿದರೆ, ಇನ್ನೂ ಕೆಲವರು ಹಣಕ್ಕೆ ಮಾರಾಟ ಮಾಡುತ್ತಾರೆ. ಅದರಲ್ಲೂ 25ರ ವಯೋಮಾನದವರ ಅಂಡಾಣು, ವೀರ್ಯಾಣುವಿಗೆ ಬೇಡಿಕೆ ಹೆಚ್ಚು. ವೀರ್ಯದಾನ ಮಾಡುವುದು ಬಹಳ ಸುಲಭ. ಆದರೆ ಅಂಡದಾನ ಅಥವಾ ಮಾರಾಟ ಹಾಗಲ್ಲ. ಹೆಚ್ಚಿನ ಸಂಖ್ಯೆಯ ಅಂಡಾಣು ಬಿಡುಗಡೆಗೆ ನೀಡುವ ಗೊನಡಾಟ್ರಾಪಿನ್ ಇಂಜೆಕ್ಷನ್‌'ನಿಂದ ಸಾಕಷ್ಟು ಅಡ್ಡಪರಿಣಾಮಗಳೂ ಆಗುತ್ತವೆ. ಜೀವಮಾನದಲ್ಲಿ ಮೂರು ಬಾರಿ ಮಾತ್ರ ಅಂಡಾಣು ದಾನ ಮಾಡಬಹುದು. ಆದರೆ ವೀರ್ಯದಾನಕ್ಕೆ ಇಂಥ ಮಿತಿಗಳಿಲ್ಲ.

- ನಿತ್ತಿಲೆ, ಕನ್ನಡಪ್ರಭ

Comments 0
Add Comment

  Related Posts

  Summer Tips

  video | Friday, April 13th, 2018

  Benifit Of Hibiscus

  video | Thursday, April 12th, 2018

  Health Benifit Of Hibiscus

  video | Thursday, April 12th, 2018

  Skin Care In Summer

  video | Saturday, April 7th, 2018

  Summer Tips

  video | Friday, April 13th, 2018
  Suvarna Web Desk