ಮಾರಣಾಂತಿಕ ಆನ್’ಲೈನ್ ಆಟವಾದ ಬ್ಲೂವೇಲ್ ಗೇಮಿಗೆ ಆನ್’ಲೈನ್’ನಲ್ಲಿ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ ಪಿಐಎಲ್ ಅನ್ನು ವಿಚಾರಣೆ ನಡೆಸಿದ ಪಂಜಾಬ್-ಹರ್ಯಾಣ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿದೆ.

ನವದೆಹಲಿ (ಸೆ.11): ಮಾರಣಾಂತಿಕ ಆನ್’ಲೈನ್ ಆಟವಾದ ಬ್ಲೂವೇಲ್ ಗೇಮಿಗೆ ಆನ್’ಲೈನ್’ನಲ್ಲಿ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ ಪಿಐಎಲ್ ಅನ್ನು ವಿಚಾರಣೆ ನಡೆಸಿದ ಪಂಜಾಬ್-ಹರ್ಯಾಣ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿದೆ.

ಇತ್ತೀಚಿಗೆ ಬ್ಲೂವೇಲ್ ಗೇಮ್’ನಿಂದ ಸಾವನ್ನಪ್ಪುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವುದಕ್ಕೆ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇದಕ್ಕೂ ಮುನ್ನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು, ಬ್ಲೂವೇಲ್ ಲಿಂಕ್’ಗಳನ್ನು ಆನ್’ಲೈನ್’ನಿಂದ ಕೂಡಲೇ ತೆಗೆದು ಹಾಕುವಂತೆ ಫೇಸ್’ಬುಕ್, ಗೂಗಲ್, ವಾಟ್ಸಾಪ್, ಯಾಹೂ, ಇನ್ಸ್ಟಾಗ್ರಾಮ್’ಗಳಿಗೆ ಕೇಳಿಕೊಂಡಿತ್ತು. ಈ ಸಂಬಂದ ಮೇನಕಾ ಗಾಂಧಿಯವರು ಕೂಡಾ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಬಳಿ ಈ ವಿಚಾರವನ್ನು ತೆಗೆದುಕೊಂಡು ಹೋಗಿದ್ದರು. ಮುಂಬೈ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಲೂವೇಲ್ ಗೇಮ್’ನಿಂದ ಹೆಚ್ಚು ಜನ ಆತ್ಮಹತ್ಯೆಗೆ ಶರಣಾಗಿದ್ದು ಇದರಿಂದ ಎಚ್ಚೆತ್ತ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.