ನೋಟ್ಬ್ಯಾನ್ನಿಂದ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಮೋದಿಯ ನಿರ್ಧಾರದಿಂದ ಬಡವರ ಸ್ಥಿತಿ ಹೀನಾಯವಾಗಿದೆ. ನೋಟ್ ಬ್ಯಾನ್ ಬಡವರ ಮೇಲೆ ಕೇಂದ್ರ ನಡೆಸಿದ ದಾಳಿ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ (ಡಿ. 27): ನೋಟ್ಬ್ಯಾನ್ನಿಂದ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಮೋದಿಯ ನಿರ್ಧಾರದಿಂದ ಬಡವರ ಸ್ಥಿತಿ ಹೀನಾಯವಾಗಿದೆ. ನೋಟ್ ಬ್ಯಾನ್ ಬಡವರ ಮೇಲೆ ಕೇಂದ್ರ ನಡೆಸಿದ ದಾಳಿ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನ. 8ರಿಂದ ಈವರೆಗೂ ಪರಿಸ್ಥಿತಿ ಒಂದೇ ರೀತಿ ಇದೆ. ಗೊಂದಲದ ಪರಿಸ್ಥಿತಿ ಬದಲಾಗಿಲ್ಲ, ಜನರ ಸ್ಥಿತಿ ಸುಧಾರಿಸಿಲ್ಲ. ನಾನು ಪ್ರಧಾನಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದೆ . ಸಹರಾ ಕಂಪನಿಯಿಂದ ಮೋದಿ ಲಂಚ ಪಡೆದಿದ್ದರು. ಆದರೆ ಈ ಕುರಿತು ಪ್ರಧಾನಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸಭೆ ಬಳಿಕ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
