ನೋಟ್ ಬ್ಯಾನ್ ಮಾಡಿ ಇಂದಿಗೆ ಒಂದು ವರ್ಷ ತುಂಬಿದೆ. ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ನೋಟ್'ಬ್ಯಾನ್ ವಿರುದ್ಧ ರಾಹುಲ್ ಗಾಂಧಿ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಪ್ರಧಾನಿ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಜನರ ನಿರುದ್ಯೋಗವನ್ನು ಕೋಮುವಾದಗಳಾಗಿ ಪರಿವರ್ತಿಸಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ನ.08): ನೋಟ್ ಬ್ಯಾನ್ ಮಾಡಿ ಇಂದಿಗೆ ಒಂದು ವರ್ಷ ತುಂಬಿದೆ. ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ನೋಟ್'ಬ್ಯಾನ್ ವಿರುದ್ಧ ರಾಹುಲ್ ಗಾಂಧಿ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಪ್ರಧಾನಿ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಜನರ ನಿರುದ್ಯೋಗವನ್ನು ಕೋಮುವಾದಗಳಾಗಿ ಪರಿವರ್ತಿಸಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡಿಮಾನಿಟೈಸೇಶನ್ ವಿವೇಚನಾ ರಹಿತವಾದದ್ದು. ಪ್ರಧಾನ ಮಂತ್ರಿಯವರ ಈ ನಿರ್ಧಾರದಿಂದ ಲಕ್ಷಾಂತರ ಜನರ ಜೀವನ ಹಾಳಾಗಿದೆ. ಅರ್ಥವ್ಯವಸ್ಥೆಯ ಮಹಾಕ್ರಾಂತಿ ಎಂದೇ ಬಿಂಬಿಸಲಾಗಿರುವ ಡಿಮಾನಿಟೈಶೇಶನ್ ಮೂಲಕ ಮೋದಿ ದೇಶದ ಅರ್ಥ ವ್ಯವಸ್ಥೆಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ.

ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸುವುದೇ ಡಿಮಾನಿಟೈಸೇಶನ್ ಉದ್ದೇಶ ಎಂದು ಮೋದಿ ಹೇಳಿದ್ದರು. ಆದರೆ ಅವರು ನಾವಿಟ್ಟಿರುವ ಭರವಸೆಯನ್ನೇ ಹೋಗಲಾಡಿಸಿದ್ದಾರೆ. ಇದು ಒಂದು ಕೆಟ್ಟ ನಿರ್ಧಾರ. ನಾವು ಜನರ ಪರವಾಗಿ ನಿಂತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.