ಮುಂಬರುವ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ನೋಟಾ (None Of The Above-NOTA) ಆಯ್ಕೆಯನ್ನು ನೀಡುವುದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್’ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸುವ ಮೂಲಕ, ರಾಜ್ಯಸಭೆ ಚುನಾವಣೆಯಲ್ಲಿ 'ನೋಟಾ'ದ ಸ್ಥಾನ ಖಾತ್ರಿಯಾಗಿದೆ.

ನವದೆಹಲಿ: ಮುಂಬರುವ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ನೋಟಾ (None Of The Above-NOTA) ಆಯ್ಕೆಯನ್ನು ನೀಡುವುದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್’ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸುವ ಮೂಲಕ, ರಾಜ್ಯಸಭೆ ಚುನಾವಣೆಯಲ್ಲಿ 'ನೋಟಾ'ದ ಸ್ಥಾನ ಖಾತ್ರಿಯಾಗಿದೆ.

ನೋಟಾ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಜನವರಿಯಲ್ಲಿ ನೋಟಿಫಿಕೆಶನ್ ಜಾರಿಯಾಗಿದ್ದರೂ, ಇಷ್ಟು ವಿಳಂಬವಾಗಿ ಏಕೆ ಈ ವಿಷಯವನ್ನು ಪ್ರಶ್ನಿಸುತ್ತಿದ್ದೀರಿ ಎಂದು ಕೇಳಿದೆ.

ಇದೇ ಆಗಸ್ಟ್ 8ರಂದು ಗುಜರಾತ್ ರಾಜ್ಯಸಭೆ ಚುನಾಔಣೆ ನಡೆಯಲಿದ್ದು, ಚುನಾವಣಾ ಆಯೋಗವು ಕುರಿತು ಕಳೆದ ಜನವರಿಯಲ್ಲೇ ನೋಟಿಫಿಕೇಶನ್ ಜಾರಿ ಮಾಡಿದೆ.

ರಾಜ್ಯಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ನೀಡುವಂತಿಲ್ಲವೆಂದು ವಾದಿಸಿ ಕಾಂಗ್ರೆಸ್ ಬುಧವಾರ ಸುಪ್ರೀಂ ಕೋರ್ಟ್’ನ ಮೆಟ್ಟಿಲೇರಿತ್ತು.

ಇದೇ ಮೊದಲ ಬಾರಿ ರಾಜ್ಯಸಭೆ ಚುನಾವಣೆಗೆ ಚುನಾವಣಾ ಆಯೋಗವು ನೋಟಾ ಆಯ್ಕೆಯನ್ನು ಪರಿಚಯಿಸಿದೆ.

ರಾಜ್ಯಸಭೆ ಚುನಾವಣೆ ಪರೋಕ್ಷ ಚುನಾವಣೆಯಾಗಿದ್ದು, ಇಲ್ಲಿ ನೋಟಾ ಆಯ್ಕೆ ಪರಿಚಯಿಸಬೇಕಾದರೆ ಸಾಂವಿಧಾನಿಕ ತಿದ್ದುಪಡಿ ಅಗತ್ಯವೆಂದು ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಕಾಂಗ್ರೆಸ್ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನೂ ಮಾಡಿದೆ.