ನವದೆಹಲಿ[ಆ. 29]  ಜಮ್ಮು ಮತ್ತು  ಕಾಶ್ಮೀರಕ್ಕೆ ಸಂಬಂಧಿಸಿ ತಪ್ಪು ವಿಚಾರಗಳ ಸಮರ್ಥನೆಗೆ ವಿಶ್ವಸಂಸ್ಥೆಗೆ ಪಾಕಿಸ್ತಾನ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ರಾಹುಲ್ ಗಾಂಧಿ ಅವರ ಹೆಸರು ಬಳಕೆ ಮಾಡಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪಾಕಿಸ್ತಾನ ರಾಹುಲ್ ಗಾಂಧಿ ಹೆಸರು ಮಾತ್ರವಲ್ಲ ಬಿಜೆಪಿ ನಾಯಕರೊಬ್ಬರ ಹೆಸರನ್ನು ಉಲ್ಲೇಖ ಮಾಡಿರುವುದು ಗೊತ್ತಾಗಿದೆ.

ಹರಿಯಾಣಾದ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಹೆಸರನ್ನು ಪಾಕಿಸ್ತಾನ ಉಲ್ಲೇಖ ಮಾಡಿದೆ. ಪಾಕಿಸ್ತಾನದ ಮಾನವ ಹಕ್ಕು ಇಲಾಖೆ ಸಚಿವ ಶಿರಿನ್ ಮಾಝಾರಿ ಬರೆದಿರುವ 7  ಪುಟಗಳ ಪತ್ರದಲ್ಲಿ ಆಗಸ್ಟ್ 10 ರಂದು ಹರಿಯಾಣಾದ ಸಿಎಂ ಹೇಳಿರುವ ಹೇಳಿಕೆಯ ಆಧಾರ ನೀಡಲಾಗಿದೆ.

ರಾಹುಲ್ ಹೆಸರು ಬಳಸಿದ ಪಾಕಿಸ್ತಾನಕ್ಕೆ ಕಾಂಗ್ರೆಸ್ ಕೌಂಟರ್

ಕಾಶ್ಮೀರದ ವಧುಗಳನ್ನು ಅಲ್ಲಿಂದ ಇಲ್ಲಿಗೆ ತರಲಾಗುವುದು’ ಎಂದು ಖಟ್ಟರ್ ನೀಡಿದ್ದ ಹೇಳಿಕೆಯ ಮಾಧ್ಯಮಗಳ ವರದಿಯನ್ನು ಆಧಾರವಾಗಿ ನೀಡಲಾಗಿದೆ.  ಆದರೆ ಇದೇ ಹೇಳಿಕೆಯನ್ನು ಖಟ್ಟರ್ ನಂತರ ಇದೊಂದು ಜೋಕ್ ಎಂದು ಹೇಳಿ ವಿವಾದ ಏಳದಂತೆ ನೋಡಿಕೊಂಡಿದ್ದರು.

ಆರಂಭದಲ್ಲಿ ಜಮ್ಮು ಕಾಶ್ಮೀರ ಮತ್ತು ಆರ್ಟಿಕಲ್ 370 ರದ್ದು ವಿಚಾರವನ್ನು ಕಾಂಗ್ರೆಸ್ ವಿರೋಧ ಮಾಡಿದ್ದರೂ ನಂತರ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಟ್ವೀಟ್ ಮಾಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಜಮ್ಮು ಕಾಶ್ಮೀರ ಭಾರತದ್ದೇ ಎಂದು ಪುನರುಚ್ಛಾರ ಮಾಡಿದ್ದರು.