ನವದೆಹಲಿ(ಅ.4):ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಎರಡನೇ ಅವಧಿಗೆ ಅಧಿಕಾರದಲ್ಲಿ ಮುಂದುವರಿಯುವ ಲಕ್ಷಣಗಳಿಲ್ಲ. ಅವರ ನಿವೃತ್ತಿಯ ಬಳಿಕ ಅವರಿಗೆ ವಾಸಿಸಲು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಮನೆಯನ್ನು ಗುರುತಿಸಲಾಗಿರುವುದು ಇದನ್ನು ದೃಢಪಡಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಲೋಕಸಭೆಯ ಮಾಜಿ ಸ್ಪೀಕರ್ ದಿವಂಗತ ಪೂರ್ಣೊ ಸಂಗ್ಮಾ ವಾಸಿಸಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಬಂಗ್ಲೆ ನಂ. 34ನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ನಿವೃತ್ತಿ ಜೀವನ ಸಾಗಿಸಲು ನೀಡಲು ನಿರ್ಧರಿಸಲಾಗಿದೆ. 2017 ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಮುಖರ್ಜಿಯವರ ಅಕಾರಾವ ಮುಗಿಯಲಿದೆ. ಮುಖರ್ಜಿ ವಿರುದ್ಧ ಸಂಗ್ಮಾ ಕಳೆದ ಚುನಾವಣೆಯಲ್ಲಿ ಸೋತಿದ್ದರು. ಪ್ರಸ್ತುತ ಸಂಗ್ಮಾ ಕುಟುಂಬ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಮಗ ಕೊನ್ರಾಡ್ ಇತ್ತೀಚೆಗೆ ತುರಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆದರೆ ಸರ್ಕಾರದಿಂದ ನೀಡಲಾಗುವ ಅತ್ಯಕ ಪ್ರತಿಷ್ಠಿತ ಮಾದರಿ 8 ಬಂಗ್ಲೆ ಮೊದಲ ಬಾರಿ ವಿಜೇತರಾಗುವ ಸಂಸದರು ಪಡೆಯಲು ಅರ್ಹರಲ್ಲ. ಹೀಗಾಗಿ ಸಂಗ್ಮಾ ಕುಟುಂಬ ಈ ಮನೆಯನ್ನು ತೆರವುಗೊಳಿಸಲಿದೆ ಎಂದು ನಗರ ಅಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ. ಈ ನಡುವೆ ಮುಖರ್ಜಿಯವರಿಗೆ ಮನೆ ಮಂಜೂರು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಲು ರಾಷ್ಟ್ರಪತಿ ಭವನದ ಮೂಲಗಳು ನಿರಾಕರಿಸಿವೆ.
‘‘ಮಾದರಿ 8 ಬಂಗ್ಲೆಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ರಾಷ್ಟ್ರಪತಿಯವರಿಗೆ ಇನ್ನೂ ಅಕಾರಾವ ಇದೆ. ಅವರ ಅಕಾರಾವ ಮುಗಿಯುವುದರೊಳಗೆ ಸಂಗ್ಮಾ ಕುಟುಂಬ ಬಂಗ್ಲೆ ತೆರವುಗೊಳಿಸಲು ಸೂಚಿಸಲಾಗಿದೆ. ಅವರು ಮನೆ ಬೇಗನೇ ಖಾಲಿ ಮಾಡಿದಲ್ಲಿ, ಮುಖರ್ಜಿಯವರಿಗೆ ಮನೆಯಲ್ಲೇನಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದಿದ್ದರೆ, ಅನುಕೂಲವಾಗುತ್ತದೆ. ಇಲ್ಲಿ ವರೆಗೂ ನಮಗೆ ಅಂಥದ್ದೇನೂ ಮನವಿ ಬಂದಿಲ್ಲ’’ ನಗರ ಅಭಿವೃದ್ಧಿ ಸಚಿವಾಲಯದ ಅಕಾರಿಯೊಬ್ಬರು ತಿಳಿಸಿದ್ದಾರೆ.
