ಸುದ್ದಿಗಾರರೊಂದಿಗೆ ಮಾತನಾಡಿ, ‘ಸದ್ಯಕ್ಕೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅವಶ್ಯಕತೆ ಇಲ್ಲ. ಅಧ್ಯಕ್ಷ ಸ್ಥಾನದ ವಿಚಾರವಾಗಿ ಮುಖ್ಯಮಂತ್ರಿ ನನ್ನ ಪರ ಬ್ಯಾಟಿಂಗ್‌ ಮಾಡಿಲ್ಲ ಎಂದು ನಿಮಗೆ ಹೇಳಿದ್ದಾರೆಯೇ, ನೀವು ಆ ವಿಚಾರವನ್ನು ಅವರನ್ನೇ ಕೇಳಿಕೊಳ್ಳಿ' ಎಂದು ಡಿಕೆಶಿ ಪತ್ರಕರ್ತರಿಗೇ ಹೇಳಿದರು.

ರಾಮನಗರ: ‘ಕೆಪಿಸಿಸಿ ಅಧ್ಯಕ್ಷನಾಗಲು ನನಗೆ ಆಸಕ್ತಿ ಇಲ್ಲ. ನಾನು ಯಾರೊಂದಿಗೂ ರೇಸಿನಲ್ಲೂ ಇಲ್ಲ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರೊಂದಿಗೆ ಮಾತನಾಡಿ, ‘ಸದ್ಯಕ್ಕೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅವಶ್ಯಕತೆ ಇಲ್ಲ. ಅಧ್ಯಕ್ಷ ಸ್ಥಾನದ ವಿಚಾರವಾಗಿ ಮುಖ್ಯಮಂತ್ರಿ ನನ್ನ ಪರ ಬ್ಯಾಟಿಂಗ್‌ ಮಾಡಿಲ್ಲ ಎಂದು ನಿಮಗೆ ಹೇಳಿದ್ದಾರೆಯೇ, ನೀವು ಆ ವಿಚಾರವನ್ನು ಅವರನ್ನೇ ಕೇಳಿಕೊಳ್ಳಿ' ಎಂದು ಪತ್ರಕರ್ತರಿಗೇ ಹೇಳಿದರು.

‘ಮುಂದಿನ ವಿಧಾನಸಭಾ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆಯುತ್ತದೆ. ಡಿ.ಕೆ.ಸುರೇಶ್‌ ಸದ್ಯ ಸಂಸತ್‌ ಸದಸ್ಯರಾಗಿದ್ದು, ಅವರು ರಾಮನಗರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿ ಸುವುದಿಲ್ಲ. ಕಾಂಗ್ರೆಸ್‌ನಿಂದ ರಾಮನಗರ ವಿಧಾನಸಭೆ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಸುತ್ತೇವೆ' ಎಂದರು.