ಜೈಪುರ(ಸೆ.16): ನಾನು ಸಚಿವ, ಹೀಗಾಗಿ ನನಗೆ ಇಂಧನ ದರ ಏರಿಕೆಯಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಆಠವಲೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ದರ ಏರಿಕೆಯಿಂದ ನನಗೆ ತೊಂದರೆಯಾಗುತ್ತಿಲ್ಲ, ನಾನು ಸಚಿವ ಸ್ಥಾನ ಕಳೆದು ಕೊಂಡಾಗ ತೈಲ ದರ ಏರಿಕೆಯಿಂದ ಬಳಲುತ್ತೇನೆ ಎಂದು ಹೇಳಿದ್ದಾರೆ.

ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತೊಂದರೆ ಅನುಭಿಸುತ್ತಿದ್ದಾರೆ, ಇಂಧನ ಬೆಲೆ ಕಡಿಮೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅಠವಾಳೆ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ ಆಯಾ ರಾಜ್ಯಗಳು ಇಂಧನದ ಮೇಲೆ ವಿಧಿಸುವ ತೆರಿಗೆ ಕಡಿತಗೊಳಿಸಿದರೆ ಮಾತ್ರ ಬೆಲೆ ಏರಿಕೆ ತಡೆಗಟ್ಟಬಹುದು ಎಂದು ಅಠವಾಳೆ ಹೇಳಿದ್ದಾರೆ. ಇನ್ನು ಅಠವಾಳೆ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮೋದಿ ಸರ್ಕಾರದಲ್ಲಿ ಸಚಿವರು ಕೇವಲ ತಮ್ಮ ದೌಲತ್ತು ಪ್ರದರ್ಶನ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದೆ.