ಸೋನಿಯಾ ಪುತ್ರಿ ಪ್ರಿಯಾಂಕಾ ವಾದ್ರಾ ಅವರ ಪತಿಯಾಗಿರುವ ವಾದ್ರಾ ಇಷ್ಟು ದಿನ ತಮ್ಮ ಉದ್ದಿಮೆಗಷ್ಟೇ ಸೀಮಿತರಾಗಿದ್ದರು. ಜಿಮ್‌ನಲ್ಲಿ ಕಸರತ್ತು ನಡೆಸುವುದನ್ನು ಹವ್ಯಾಸವಾಗಿಸಿಕೊಂಡಿದ್ದರು. ಅಮೇಠಿಯಲ್ಲಿ ಪ್ರಿಯಾಂಕ ಜತೆ ಪ್ರಚಾರ ಮಾಡಿದ್ದರು.
ನವದೆಹಲಿ(ಏ.18): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂ ಅಳಿಯ ರಾಬರ್ಟ್ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಧುಮುಕಲು ಭೂಮಿಕೆ ಸಜ್ಜುಗೊಳಿಸಿಕೊಳ್ಳುತ್ತಿರುವಂತಿದೆ.
ಸೋನಿಯಾ ಪುತ್ರಿ ಪ್ರಿಯಾಂಕಾ ವಾದ್ರಾ ಅವರ ಪತಿಯಾಗಿರುವ ವಾದ್ರಾ ಇಷ್ಟು ದಿನ ತಮ್ಮ ಉದ್ದಿಮೆಗಷ್ಟೇ ಸೀಮಿತರಾಗಿದ್ದರು. ಜಿಮ್ನಲ್ಲಿ ಕಸರತ್ತು ನಡೆಸುವುದನ್ನು ಹವ್ಯಾಸವಾಗಿಸಿಕೊಂಡಿದ್ದರು. ಅಮೇಠಿಯಲ್ಲಿ ಪ್ರಿಯಾಂಕ ಜತೆ ಪ್ರಚಾರ ಮಾಡಿದ್ದರು. ಆದರೆ ಇತ್ತೀಚೆಗೆ ಅವರು ಸಮಾಜದ ದುರ್ಬಲ ವರ್ಗಗಳ ಜತೆ ಸಮಯ ಕಳೆಯುವ ಫೋಟೋಗಳು, ಪ್ರಚಲಿತ ವಿದ್ಯಮಾನಗಳ ಕುರಿತಂತೆ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯ ಹೊರಗೆ ಹಾಗೂ ಹನುಮಾನ್ ಮಂದಿರದಲ್ಲಿ ಬಡವರಿಗೆ ಊಟ ಬಡಿಸುವ ಮತ್ತು ದೃಷ್ಟಿಹೀನ ಮಕ್ಕಳ ಜತೆ ಕೇಕ್ ಕತ್ತರಿಸುವ ಫೋಟೋಗಳನ್ನೂ ಹಾಕಿಕೊಂಡಿದ್ದಾರೆ. ಹಲವು ವಿಚಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಸಕ್ರಿಯ ರಾಜಕಾರಣ ಪ್ರವೇಶಿಸಬೇಕು ಎಂದು ಜನರು ಸಲಹೆ ಮಾಡುತ್ತಿದ್ದಾರೆ. ನಾನು ಬದಲಾವಣೆ ಮಾಡಬಹುದು ಎಂದು ಜನರಿಗೆ ಅನಿಸಿದರೆ, ನಾನು ರಾಜಕೀಯ ಸೇರುತ್ತೇನೆ ಎಂದು ತಿಳಿಸಿದ್ದಾರೆ.
