ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ಈಕೆಯನ್ನು ಕುಡಿದು ಮದುವೆಗೆ ಆಗಮಿಸಿದ್ದ

ಬಟಿಂಡಾ(ಡಿ.04): ದೆಹಲಿಯಲ್ಲಿ 1999 ರಲ್ಲಿ ಮದ್ಯ ಕೊಡದ ಕಾರಣಕ್ಕೆ ಪಾರಿಚಾರಕಿಯನ್ನು ಕ್ರೂರಿಯೊಬ್ಬ ಡಿಕ್ಕಿ ಕೊಂದಿದ್ದ . ಈಗ ಅದೇ ಮಾದರಿಯ ಘಟನೆ ಪಂಜಾಬ್'ನಲ್ಲಿ ನಡೆದಿದೆ.

ಪಂಜಾಬ್​ನ ಬಟಿಂಡಾದಲ್ಲಿ ತನ್ನ ಜೊತೆ ಡ್ಯಾನ್ಸ್ ಮಾಡಲು ನಿರಾಕರಿಸಿದ ಕಾರಣಕ್ಕೆ ಡ್ಯಾನ್ಸರ್ ಒಬ್ಬಳನ್ನು ಹಂತಕನೊಬ್ಬ ಗುಂಡಿಟ್ಟು ಕೊಂದಿದ್ದಾನೆ. ಮೃತಳು 22 ವರ್ಷದ ಗರ್ಭಿಣಿ. ಮೂಲತಃ ನೃತ್ಯಪಟುವಾಗಿದ್ದು ಈಕೆ ವಿವಾಹ ಸಮಾರಂಭಕ್ಕೆ ಡ್ಯಾನ್ಸ್ ಮಾಡಲು ಆಗಮಿಸಿದ್ದಳು. ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ಈಕೆಯನ್ನು ಕುಡಿದು ಮದುವೆಗೆ ಆಗಮಿಸಿದ್ದ ಕುಲುವಿಂದರ್ ಎಂಬಾತ ತನ್ನ ಜೊತೆ ಡ್ಯಾನ್ಸ್ ಮಾಡು ಎಂದು ಬಲವಂತ ಮಾಡಿದ್ದಾನೆ. ಆಕೆ ಆತನ ಜೊತೆ ನೃತ್ಯ ಮಾಡಲಿಲ್ಲ ವೆಂಬ ಕಾರಣಕ್ಕೆ ಆಕ್ರೋಶಗೊಂಡು ತಲೆಗೆ ಗುಂಡಿಕ್ಕಿದ್ದಾನೆ. ಸ್ಥಳದಲ್ಲೇ ಆಕೆ ಮೃತಪಟ್ಟಿದ್ದು, ಕ್ರೂರಿ ಹಂತಕ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.