ಹರ್ಯಾಣದ ಡೇರಾ ಸಚ್ಚಾ ಗುರು ಗುರ್ಮೀತ್ ನಿತ್ಯವೂ ಹೊಸ ಹೊಸ ಹುಡುಗಿಯನ್ನು ತನ್ನ ಕೋಣೆಗೆ ಕರೆಸಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು. ಅಚ್ಚರಿ ವಿಷಯವೆಂದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜೊಂಗ್ ಉನ್‌'ಗೂ ಇದೇ ರೀತಿಯ ಚಟ ಹವ್ಯಾಸ ಇದೆಯಂತೆ.
ಸೋಲ್(ಸೆ.22): ಹರ್ಯಾಣದ ಡೇರಾ ಸಚ್ಚಾ ಗುರು ಗುರ್ಮೀತ್ ನಿತ್ಯವೂ ಹೊಸ ಹೊಸ ಹುಡುಗಿಯನ್ನು ತನ್ನ ಕೋಣೆಗೆ ಕರೆಸಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು. ಅಚ್ಚರಿ ವಿಷಯವೆಂದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜೊಂಗ್ ಉನ್'ಗೂ ಇದೇ ರೀತಿಯ ಚಟ ಹವ್ಯಾಸ ಇದೆಯಂತೆ.
ಕಿಮ್, ಪ್ಯೋಂಗ್'ಯಾಂಗ್'ನಲ್ಲಿ ನೂರಾರು ರಹಸ್ಯ ಮನೆಗಳನ್ನು ಹೊಂದಿದ್ದಾನೆ. ಹೀಗಾಗಿ ನಿತ್ಯ ಆತ ಎಲ್ಲಿ ಉಳಿದುಕೊಂಡಿರುತ್ತಾನೆ ಎಂಬುದು ವಿದೇಶಿ ಗೂಢಚರರಿಗೂ ಗೊತ್ತಾಗುವುದಿಲ್ಲ. ಸುಂದರ ಹೈಸ್ಕೂಲ್ ವಿದ್ಯಾರ್ಥಿನಿಯರನ್ನು ಆತ ಈ ಮನೆಗೆ ಕರೆಸಿಕೊಳ್ಳುತ್ತಾನೆ. ಉದ್ದವಾದ ಮತ್ತು ನೇರವಾದ ಕಾಲುಗಳನ್ನು ಹೊಂದಿದ ವಿದ್ಯಾರ್ಥಿನಿಯರನ್ನು ಮಾತ್ರವೇ ಈ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅವರೆಲ್ಲಾ ಕಿಮ್ ಜೊತೆ ಹಾಸಿಗೆ ಹಂಚಿಕೊಳ್ಳಬೇಕು. ಒಂದು ವೇಳೆ ಅವರು ಗರ್ಭಿಣಿಯರಾದರೆ, ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಡುತ್ತಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಬ್ರಿಟನ್ ದ ಮಿರರ್ ಪತ್ರಿಕೆ ವರದಿ ಮಾಡಿದೆ.
